ದಿಗಂತ ವರದಿ ವಿಜಯಪುರ:
ಭಾರ ಎತ್ತುವ ಸ್ಪರ್ಧೆಯಲ್ಲಿ ಸಾತಿದಾರ್ ಕಾಲ ಮೇಲೆ 125 ಕೆಜಿ ತೂಕದ ಗುಂಡು ಕಲ್ಲು ಬಿದ್ದು ಅವಘಡ ಸಂಭವಿಸಿರುವ ಘಟನೆ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ನಡೆದಿದೆ.
ಇಲ್ಲಿನ ಬಸವಣ್ಣ ದೇವರ ಜಾತ್ರೆ ನಿಮಿತ್ತ ಹಮ್ಮಿಕೊಂಡ ಭಾರ ಎತ್ತುವ ಸ್ಪರ್ಧೆಯಲ್ಲಿ, ಸಾತಿದಾರ್ ಶಿವನಗೌಡ ಪಾಟೀಲ ಗಾಯಗೊಂಡಿದ್ದಾನೆ.
125 ಕೆಜಿ ಗುಂಡು ಕಲ್ಲು ಎತ್ತುತ್ತಿದ್ದ ಪೈಲ್ವಾನ್ ಚಂದ್ರಶೇಖರ ಯಾಳವಾರ ಗುಂಡು ಕಲ್ಲು ಕೆಳಗಿಳಿಸುವ ವೇಳೆ ಸಾತಿದಾರ್ ಶಿವನಗೌಡನ ಕಾಲುಮೇಲೆ ಬಿದ್ದು, ಕಾಲು ಮೂಳೆ ಮುರಿದಿದೆ. ಚಿಕಿತ್ಸೆಗಾಗಿ ಮಹಾರಾಷ್ಟ್ರದ ಮಿರಜ್ ಆಸ್ಪತ್ರೆಗೆ ದಾಖಲಾಗಿದ್ದು, ಕಾಲಿಗೆ ಎರಡು ರಾಡ್ ಅಳವಡಿಕೆ ಮಾಡಲಾಗಿದೆ.