ಆರೋಗ್ಯ ಜಾಗೃತಿ ಹೆಚ್ಚುತ್ತಿರುವ ಈ ದಿನಗಳಲ್ಲಿ, ಪೋಷಕಾಂಶಗಳಿಂದ ತುಂಬಿದ ಹಾಗೂ ಕಡಿಮೆ ಕ್ಯಾಲೊರಿಯ ಆಹಾರಗಳತ್ತ ಜನರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಕಡಲೆಕಾಳು ಸಲಾಡ್ ಇಂತಹ ಆಹಾರಗಳಲ್ಲಿ ಒಂದು, ಇದು ರುಚಿ ಮತ್ತು ಆರೋಗ್ಯವನ್ನು ಒಟ್ಟಿಗೆ ಒದಗಿಸುತ್ತದೆ. ಪ್ರೋಟೀನ್, ಫೈಬರ್, ವಿಟಮಿನ್ ಮತ್ತು ಖನಿಜಗಳಿಂದ ಸಮೃದ್ಧವಾದ ಈ ಸಲಾಡ್ ತೂಕ ಇಳಿಕೆ, ಶಕ್ತಿ ಹೆಚ್ಚಳ ಮತ್ತು ಜೀರ್ಣಕ್ರಿಯೆ ಸುಧಾರಣೆಗೆ ಸಹಾಯಕ.
ಬೇಕಾಗುವ ಪದಾರ್ಥಗಳು
ಬೇಯಿಸಿದ ಕಡಲೆಕಾಳು – 1 ಕಪ್
ಸೌತೆಕಾಯಿ – ½ ಕಪ್ (ಕತ್ತರಿಸಿದ)
ಈರುಳ್ಳಿ – ½ ಕಪ್ (ಕತ್ತರಿಸಿದ)
ಟೊಮೆಟೊ – ½ ಕಪ್ (ಕತ್ತರಿಸಿದ)
ಹಸಿ ಮೆಣಸಿನಕಾಯಿ – 2 (ನುಣ್ಣಗೆ ಕತ್ತರಿಸಿದ)
ಕೊತ್ತಂಬರಿ ಸೊಪ್ಪು – ½ ಕಪ್ (ನುಣ್ಣಗೆ ಕತ್ತರಿಸಿದ)
ಮೊಸರು – 1 ಕಪ್
ಎಣ್ಣೆ – 2 ಚಮಚ
ನಿಂಬೆ ರಸ – 1 ಚಮಚ
ಮೆಣಸಿನ ಪುಡಿ – ½ ಚಮಚ
ಉಪ್ಪು – ರುಚಿಗೆ ತಕ್ಕಂತೆ
ತಯಾರಿಸುವ ವಿಧಾನ
ಕಡಲೆಕಾಳನ್ನು 6ರಿಂದ 8 ಗಂಟೆಗಳ ಕಾಲ ನೆನೆಸಿಟ್ಟು, ಬೇಯಿಸಿ. ನೀರನ್ನು ಸೋಸಿ ಪಕ್ಕಕ್ಕೆ ಇಡಿ.
ಒಂದು ದೊಡ್ಡ ಪಾತ್ರೆಯಲ್ಲಿ ಕಡಲೆಕಾಳು, ಸೌತೆಕಾಯಿ, ಟೊಮೆಟೊ, ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿ ಹಾಕಿ ಮಿಶ್ರಣ ಮಾಡಿ. ಈಗ ಕೊತ್ತಂಬರಿ ಸೊಪ್ಪು ಸೇರಿಸಿ.
ಸಣ್ಣ ಬೌಲ್ ನಲ್ಲಿ ಮೊಸರು, ಎಣ್ಣೆ, ನಿಂಬೆ ರಸ, ಮೆಣಸಿನ ಪುಡಿ ಸೇರಿಸಿ ಮಿಶ್ರಣ ಮಾಡಿ. ಈ ಮೊಸರು ಮಿಶ್ರಣವನ್ನು ಕಡಲೆಕಾಳು ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಬೆರೆಸಿ. ಉಪ್ಪು ಹಾಕಿ ಮತ್ತೊಮ್ಮೆ ಮಿಶ್ರಣ ಮಾಡಿದರೆ ಕಡಲೆಕಾಳು ಸಲಾಡ್ ರೆಡಿ.
ಆರೋಗ್ಯ ಪ್ರಯೋಜನಗಳು
ಪ್ರೋಟೀನ್ ಸಮೃದ್ಧವಾಗಿರುವುದರಿಂದ ಸ್ನಾಯುಗಳ ಅಭಿವೃದ್ಧಿಗೆ ಸಹಾಯಕ
ಫೈಬರ್‌ನಿಂದ ಜೀರ್ಣಕ್ರಿಯೆ ಸುಧಾರಣೆ
ಕಡಿಮೆ ಕ್ಯಾಲೊರಿಯಿಂದ ತೂಕ ನಿಯಂತ್ರಣ
ವಿಟಮಿನ್ ಮತ್ತು ಖನಿಜಗಳಿಂದ ರೋಗನಿರೋಧಕ ಶಕ್ತಿ ವೃದ್ಧಿ
ಚರ್ಮದ ಆರೋಗ್ಯಕ್ಕೆ ಪೋಷಕಾಂಶ ಒದಗಿಸುವುದು
ಕಡಲೆಕಾಳು ಸಲಾಡ್ ರುಚಿಕರವಾಗಿರುವುದಷ್ಟೇ ಅಲ್ಲ, ಅದು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವಂತಾದ ಆರೋಗ್ಯಕರ ಆಯ್ಕೆಯಾಗಿದೆ. ತೂಕ ಇಳಿಕೆ ಬಯಸುವವರು ಅಥವಾ ಶಕ್ತಿವರ್ಧಕ ಆಹಾರ ಹುಡುಕುತ್ತಿರುವವರು ಈ ಸಲಾಡ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು.