ಅಧಿಕ ತೂಕ ಅನ್ನೋದು ಇಂದಿನ ಕಾಲದಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೆಲಸದ ಒತ್ತಡ, ಕೆಟ್ಟ ಆಹಾರ ಪದ್ಧತಿ ಹಾಗೂ ವ್ಯಾಯಾಮದ ಕೊರತೆಯಿಂದಾಗಿ ಯುವಕರಲ್ಲಿಯೇ ಬೊಜ್ಜುತನ ಹೆಚ್ಚುತ್ತಿದೆ. ತೂಕ ಕಡಿಮೆ ಮಾಡಲು ಔಷಧಿ ಅಥವಾ ಕಠಿಣ ಡಯಟ್ ಅವಲಂಬಿಸುವ ಬದಲು, ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುವುದೇ ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.
- ಸಮತೋಲಿತ ಆಹಾರ: ಜಂಕ್ ಫುಡ್ ಮತ್ತು ಸಕ್ಕರೆ ಪಾನೀಯಗಳನ್ನು ತಪ್ಪಿಸಿ, ಹಣ್ಣುಗಳು, ತರಕಾರಿಗಳು, ಧಾನ್ಯಗಳು ಹಾಗೂ ಪ್ರೋಟೀನ್ ಸಮೃದ್ಧ ಆಹಾರವನ್ನು ಸೇರಿಸಿಕೊಳ್ಳಬೇಕು.
- ಫೈಬರ್ ಹಾಗೂ ಪ್ರೋಟೀನ್: ತರಕಾರಿ, ಹಣ್ಣುಗಳು, ಓಟ್ಸ್ ಹಾಗೂ ದ್ವಿದಳ ಧಾನ್ಯಗಳು ದೀರ್ಘಕಾಲ ಹೊಟ್ಟೆ ತುಂಬಿಸುವುದರಿಂದ ಹೆಚ್ಚುವರಿಯಾಗಿ ತಿನ್ನುವುದನ್ನು ತಡೆಯುತ್ತವೆ. ಪ್ರೋಟೀನ್ ಆಹಾರವು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ.
- ನಿಯಮಿತ ವ್ಯಾಯಾಮ: ಓಟ, ಸೈಕ್ಲಿಂಗ್, ಯೋಗ ಮತ್ತು ಶಕ್ತಿವರ್ಧಕ ವ್ಯಾಯಾಮಗಳು ದೇಹದ ಕೊಬ್ಬನ್ನು ಕರಗಿಸಲು ಪರಿಣಾಮಕಾರಿ.
- ನೀರಿನ ಸೇವನೆ: ಪ್ರತಿದಿನ ಸಾಕಷ್ಟು ನೀರು ಕುಡಿಯುವುದರಿಂದ ದೇಹದಿಂದ ವಿಷಕಾರಿ ಅಂಶಗಳು ಹೊರಬಂದು ತೂಕ ಇಳಿಸಲು ಸಹಾಯ ಮಾಡುತ್ತದೆ.
- ನಿದ್ರೆ ಮತ್ತು ಒತ್ತಡ ನಿಯಂತ್ರಣ: ಸಾಕಷ್ಟು ನಿದ್ರೆ ಮತ್ತು ಒತ್ತಡ ಕಡಿಮೆ ಮಾಡುವುದು ತೂಕ ನಿಯಂತ್ರಣಕ್ಕೆ ಮುಖ್ಯ. ಧ್ಯಾನ ಮತ್ತು ಯೋಗ ಮನಸ್ಸು ಹಾಗೂ ದೇಹಕ್ಕೆ ಸಮತೋಲನ ನೀಡುತ್ತವೆ.
- ತೂಕ ಇಳಿಸಿಕೊಳ್ಳುವುದು ಕಠಿಣ ಕಾರ್ಯವಲ್ಲ. ಸರಿಯಾದ ಆಹಾರ, ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸಿದರೆ, ದೇಹ ತೂಕವನ್ನು ಸಹಜವಾಗಿ ನಿಯಂತ್ರಿಸಬಹುದು