October 8, 2026
Thursday, October 8, 2026
spot_img

ರಣಬಾಲಿ ಜಗತ್ತಿಗೆ ಸ್ವಾಗತ: ಸಿನಿಮಾ ಟ್ರೇಲರ್‌ ಹಂಚಿಕೊಂಡ ನಟಿ ರಶ್ಮಿಕಾ ಮಂದಣ್ಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ರಶ್ಮಿಕಾ ಮಂದಣ್ಣ, ವಿಜಯ್‌ ದೇವರಕೊಂಡ ಅಭಿನಯದ ರಣಬಾಲಿ ಸಿನಿಮಾ ಟ್ರೈಲರ್‌ ರಿಲೀಸ್‌ ಆಗಿದೆ. ನಟಿ ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ರಣಬಾಲಿ ಸಿನಿಮಾದ ಟ್ರೈಲರ್‌ ಹಂಚಿಕೊಂಡು ರಣಬಾಲಿ ಜಗತ್ತಿಗೆ ಸ್ವಾಗತ ಎಂದು ಕ್ಯಾಪ್ಷನ್‌ ಹಾಕಿಕೊಂಡಿದ್ದಾರೆ.

ರಾಹುಲ್‌ ಸಾಂಕೃತ್ಯಾನ್‌ ನಿರ್ದೇಶನದ ಪ್ಯಾನ್‌ ಇಂಡಿಯಾ ತೆಲುಗು ಸಿನಿಮಾ ಇದಾಗಿದ್ದು, ಐತಿಹಾಸಿಕ ಆಕ್ಷನ್‌ ಡ್ರಾಮಾ ಟ್ರೈಲರ್‌ ಕಣ್ತುಂಬಿಕೊಂಡ ಜನರು ವಿಜಯ್‌ ನಟನೆಗೆ ಫಿದಾ ಆಗಿದ್ದಾರೆ. ಬ್ರಿಟಿಷ್‌ ವಸಾಹತುಶಾಹಿ ಆಳ್ವಿಕೆಯ ಅವಧಿಯಲ್ಲಿ ಆಂಧ್ರಪ್ರದೇಶದ ರಾಯಲಸೀಮೆ ಭಾಗದಲ್ಲಿ ಏನೆಲ್ಲಾ ಆಯ್ತು ಎಂಬ ಕಥೆ ಇದರಲ್ಲಿದೆ.

https://www.instagram.com/reel/DePJJm0IaW-/?stkn=MWFsMjMzYnphbWZ3Yw%3D%3D

ಬ್ರಿಟಿಷರ ಕ್ರೂರ ನೀತಿಗಳು, ಆಹಾರ ಧಾನ್ಯಗಳು ರಫ್ತು, ತೆರಿಗೆ ವಸೂಲಿ ಹಾಗೂ ಹಸಿವಿನಿಂದ ಜನ ಸಾಯುತ್ತಾರೆ. ಈ ಸಮಯದಲ್ಲಿ ತಮ್ಮ ರಾಯಲಸೀಮೆ ನೆಲದ ರಕ್ಷಣೆಗೆ ರಣಬಾಲಿ ಹೇಗೆ ನಿಲ್ಲುತ್ತಾರೆ ಎನ್ನುವುದನ್ನು ತೋರಿಸಲಾಗಿದೆ. ವಿಜಯ್‌ ಹಾಗೂ ರಶ್ಮಿಕಾ ನಟನೆಯ ಝಲಕ್‌ ಕಾಣಿಸಿದೆ.

ಈ ಬಾರಿ ವಿಜಯ್‌ ಸಾಫ್ಟ್‌ ಚಾಕೋಲೆಟ್‌ ಬಾಯ್‌ ಅವತಾರ ಬಿಟ್ಟು ಮತ್ತದೇ ಆಂಗ್ರಿ ಮೋಡ್‌ಗೆ ಹೋದಂತೆ ಕಾಣಿಸುತ್ತಾರೆ. ಲುಕ್‌ ಹಾಗೂ ಕ್ಯಾರೆಕ್ಟರ್‌ ಒಂದಕ್ಕೊಂದು ಕಾಂಪ್ಲಿಮೆಂಟ್‌ ಮಾಡುವಂತಿದೆ. ರಶ್ಮಿಕಾ ಕೂಡ ರಣಬಾಲಿಯನ್ನು ಮದುವೆಯಾಗಿ ಬರುವ ಮುಗ್ಧೆಯಂತೆ ಕಾಣಿಸುತ್ತಾರೆ. ಇದು ಶಕ್ತಿಯುತ ಪಾತ್ರವಾಗಿದ್ದು, ಹೆಚ್ಚು ಕ್ಯಾರೆಕ್ಟರ್‌ ಈವೆಂಟ್ಸ್‌ನ್ನು ಟ್ರೈಲರ್‌ನಲ್ಲಿ ತೋರಿಸಿಲ್ಲ.

ಈ ಪವರ್‌ಫುಲ್‌ ಟ್ರೈಲರ್‌ ನೋಡಿದಮೇಲೆ ಜನ ವಿಜಯ್‌ ದೇವರಕೊಂಡ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಪತಿ ಪತ್ನಿ ಆದ ನಂತರ ಇದೇ ಮೊದಲ ಬಾರಿಗೆ ರಶ್ಮಿಕಾ ಹಾಗೂ ವಿಜಯ್‌ ಒಂದೇ ಸಿನಿಮಾದಲ್ಲಿ ನಟಿಸುತ್ತಿರುವುದು ಕೂಡ ಪ್ಲಸ್‌ ಪಾಯಿಂಟ್‌ ಆಗಿದೆ.

Must Read