ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ‌ ಮಂಡಳಿಗೆ ಸದಸ್ಯರ ನೇಮಕ: ಬೆಂಬಲಿಗರಲ್ಲಿ ಸಂತಸ

ಹೊಸದಿಗಂತ ವರದಿ,ಬಳ್ಳಾರಿ:

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ‌ ಮಂಡಳಿಗೆ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಸೇರಿದಂತೆ ಇತರರನ್ನು ಸದಸ್ಯರನ್ನಾಗಿ ನೇಮಕ ಮಾಡಿ ಕ.ಕ.ಪ್ರದೇಶಾಭಿವೃದ್ಧಿ ಮಂಡಳಿ ವಿಭಾಗದ ನಿರ್ದೇಶಕರು ಹಾಗೂ ಪದ ನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ, ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಡು.ಚಂದ್ರಶೇಖರಯ್ಯ ಆದೇಶ ಹೊರಡಿಸಿದ್ದಾರೆ.
ಕೂಡ್ಲಗಿ ಶಾಸಕ ಎನ್.ವೈ.ಗೋಪಾಲಕೃಷ್ಣ, ಆಳಂದ ಶಾಸಕ ಸುಭಾಷ್ ಗುತ್ತೆದಾರ್, ಶಹಾಪುರ ಎಮ್ಮೆಲ್ಸಿ ಶರಣಬಸಪ್ಪಗೌಡ ದರಶನಾಪೂರ್, ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಕಾಶಂಪೂರ್, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕಲಬುರ್ಗಿ ಗ್ರಾಮೀಣ ಶಾಸಕ ಬಸವರಾಜ್ ಮುಟ್ಟಿಮಡ್, ಯಾದಗಿರಿ ಶಾಸಕರು ವೆಂಕಟರೆಡ್ಡಿ ಮುದ್ನಾಳ್, ಎಮ್ಮೆಲ್ಸಿ ಬಿ.ಜಿ.ಪಾಟೀಲ್, ರಘುನಾಥ್ ರಾವ್‌‌ ಮಲ್ಕ್ಯಪುರೆ, ರಾಯಚೂರು ಸಾಂಸದ ರಾಜಾ ಅಮರೇಶ್ ನಾಯಕ್ ಅವರನ್ನು ಒಂದು ವರ್ಷದ‌ ಅವದಿಗೆ ಅಥವಾ ಮುಂದಿನ ಆದೇಶದ ವರೆಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!