ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳ ಸಚಿವ, ತೃಣಮೂಲ ಕಾಂಗ್ರೆಸ್ ನಾಯಕ ಸಾಧನ್ ಪಾಂಡೆ ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ಶ್ವಾಸಕೋಶದ ಸೋಂಕಿನಿಂದ ಪಾಂಡೆ ಅವರು ಬಳಲುತ್ತಿದ್ದು, ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದುಮ ನಮ್ಮ ಹಿರಿಯ ಸಹೋದ್ಯೋಗಿ, ಪಕ್ಷದ ನಾಯಕರು, ಸಚಿವರಾಗಿದ್ದ ಸಾಧನ್ ಪಾಂಡೆ ಇನ್ನಿಲ್ಲ. ಅವರ ನಿಧನದಿಂದ ನಷ್ಟವಾಗಿದೆ, ಅವರ ಕುಟುಂಬ, ಸ್ನೇಹಿತರು ಹಾಗೂ ಅನುಯಾಯಿಗಳಿಗೆ ಸಾಂತ್ವನ ಹೇಳುತ್ತೇನೆ ಎಂದಿದ್ದಾರೆ.