ಹಿಜಾಬ್-ಕೇಸರಿ ವಿವಾದ ಬೆನ್ನಲ್ಲೇ ಪ್ರಾರಂಭವಾಯಿತು ಸಿಂಧೂರ ಚಳವಳಿ

ಹೊಸದಿಗಂತ ವರದಿ, ಕಲಬುರಗಿ:

ಹಿಜಾಬ್ ಕೇಸರಿ ವಿವಾದದ ಜೊತೆಗೆ ಇದೀಗ ಸಿಂಧೂರದ ಚರ್ಚೆ ಪ್ರಾರಂಭವಾಗಿದೆ. ಸಿಂಧೂರ ಇಟ್ಟುಕೊಂಡು ಶಾಲೆಗೆ ಬರುತ್ತಾರೆ ಎಂಬ ಮುಸ್ಲಿಂ ವಿದ್ಯಾರ್ಥಿನಿಯರ ಪ್ರಶ್ನೆಗೆ ಆಕ್ರೋಶ ವ್ಯಕ್ತಪಡಿಸಿ, ಕಲಬುರಗಿಯಲ್ಲಿ ಸಿಂದೂರ ಚಳವಳಿ ಪ್ರಾರಂಭವಾಗಿದೆ.
ನಗರದ ಐತಿಹಾಸಿಕ ಶ್ರೀ ಶರಣಬಸವೇಶ್ವರ ದೆವಸ್ಥಾನದ ಆವರಣದಲ್ಲಿ ಹಿಂದೂಪರ ಸಂಘಟನೆಯ ಮಹಿಳೆಯರಿಂದ ಸಿಂಧೂರ ಚಳವಳಿ ಆರಂಭವಾಗಿದೆ.
ಬಿಜೆಪಿ, ಹಿಂದೂ ಪರ ಸಂಘಟನೆಯ ಕಾರ್ಯಕರ್ತೆ ದಿವ್ಯಾ ಹಾಗರಗಿ ನೇತೃತ್ವದಲ್ಲಿ ಸಿಂಧೂರ ಚಳುವಳಿ ಆರಂಭವಾಗಿದ್ದು, ಮಹಿಳೆಯರಿಗೆ ಕೇಸರಿ ಶಾಲು ಹಾಕಿ, ಆರಶಿಣ-ಕುಂಕುಮ ಹಚ್ಚಿ, ಬಳೆ ಕೊಟ್ಟು, ಹೂವು ನೀಡಿ ಸಿಂಧೂರ ಚಳುವಳಿಗೆ ಚಾಲನೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಸಂಘಟನೆಯ ಕಾರ್ಯಕರ್ತೆ ದಿವ್ಯಾ ಹಾಗರಗಿ, ಸಿಂಧೂರ ಹಚ್ಚಿಕೊಳ್ಳುವುದು ನಮ್ಮ ಧರ್ಮದ ಸಂಸ್ಕೃತಿ ಆಗಿದೆ. ಹಿಂದೂ ಧರ್ಮದ ಸಂಸ್ಕೃತಿ-ಪರಂಪರೆಯಂತೆ ನಾವು ನಡೆಯುತ್ತೇವೆ ಎಂದರು.
ಹಿಜಾಬ್ ಪ್ರಕರಣವು ನ್ಯಾಯಲಯದ ಅಂಗಳದಲ್ಲಿ ಇರುವುದರಿಂದ ಮಧ್ಯಂತರ ಆದೇಶವನ್ನು ಪಾಲನೆ ಮಾಡುತ್ತಿದ್ದು, ಎಲರೂ ತೀರ್ಪು ಪಾಲನೆ ಮಾಡಬೇಕು ಎಂದರು.
ಮುಂಬರುವ ದಿನಗಳಲ್ಲಿ ಸಿಂಧೂರ ಚಳವಳಿಯೂ ಸಿಂದಗಿ ಅಂಬಾಬಾಯಿ ದೇವಸ್ಥಾನ, ಕೋರಂಟಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಆರಶಿಣ ಕುಂಕುಮ ಕೊಡುವ ಮೂಲಕ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈ ‌ಸಂದರ್ಭದಲ್ಲಿ ಭಾಗೀರತಿ ಗುನ್ನಾಪುರ, ಸವಿತಾ ಪಾಟೀಲ್, ಸಿದ್ದಮ್ಮಾ, ಇಂದಿರಾ,ಸೇರಿದಂತೆ ಅನೇಕ ಹಿಂದೂ ಪರ ಸಂಘಟನೆಯ ಮುಖಂಡರು ಬಿಜೆಪಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!