Tuesday, March 28, 2023

Latest Posts

SHOCKING VIDEO| ಸ್ನೇಹಿತರ ಕಣ್ಣೆದುರೇ ಸಾವು: ಕ್ಷಣಾರ್ಧದಲ್ಲಿ ಅನಿರೀಕ್ಷಿತ ದುರಂತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೆಲವೊಮ್ಮೆ ಅನಿರೀಕ್ಷಿತ ಅಪಘಾತಗಳು ಸಂಭವಿಸುತ್ತವೆ. ನಿಜವಾಗಿ ಏನಾಯಿತು ಎಂಬುದನ್ನು ಅರಿತುಕೊಳ್ಳುವ ಮೊದಲೇ ಅನಾಹುತ ನಡೆದುಹೋಗಿರುತ್ತದೆ. ಆಪ್ತರೆದುರೇ ಸಾವಿನ ಕದ ತಟ್ಟುತ್ತಾರೆ.. ಇಂತಹದೊಂದು ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ನಡೆದಿದೆ.  ಸ್ನೇಹಿತರ ಕಣ್ಣೆದುರೇ ನೋಡು ನೋಡುತ್ತಲೇ ಮರಳಿ ಬಾರದ ಲೋಕಕ್ಕೆ ತೆರಳಿದ್ದಾನೆ.

ವಿದ್ಯಾರ್ಥಿಯೊಬ್ಬ ಆಕಸ್ಮಿಕವಾಗಿ 6ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ. ಪಶ್ಚಿಮ ಬಂಗಾಳದ ಇಶಾಂಶು ಭಟ್ಟಾಚಾರ್ಯ (20) ಎಂಬ ವಿದ್ಯಾರ್ಥಿ ನೀಟ್‌ ಕೋಚಿಂಗ್‌ಗಾಗಿ ಕೋಟಾದ ಕೋಚಿಂಗ್‌ ಇನ್‌ಸ್ಟಿಟ್ಯೂಟ್‌ಗೆ ಬಂದಿದ್ದ. ಇದೇ ವೇಳೆ ಅದೇ ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದಿದ್ದಾನೆ. ಅಷ್ಟೊಂದು ಎತ್ತರದಿಂದ ಬಿದ್ದಿದ್ದರಿಂದ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಭಟ್ಟಾಚಾರ್ಯ ಕಣ್ಣೆದುರೇ ಬಿದ್ದು ಸಾವನ್ನಪ್ಪಿದ್ದು ಸ್ನೇಹಿತರನ್ನು ಬೆಚ್ಚಿ ಬೀಳಿಸಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!