ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್‌ನ ಬೆನ್‍ಹಾಲ್ ಗ್ರೀನ್‍ನ 102 ವರ್ಷದ ವೃದ್ಧೆಯೊಬ್ಬರು ತಮ್ಮ ಹುಟ್ಟುಹಬ್ಬದಂದು 7,000 ಅಡಿ ಎತ್ತರದಿಂದ ಸ್ಕೈಡೈವಿಂಗ್ ಮಾಡುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ವಯಸ್ಸು ಕೇವಲ ಒಂದು ಸಂಖ್ಯೆ ಎಂದು ಅವರು ಮತ್ತೊಮ್ಮೆ ಸಾಬೀತುಪಡಿಸಿದರು.
ವಿಮಾನದ ಮೇಲಿಂದ ಇಷ್ಟು ಎತ್ತರದಿಂದ ಹೊರಗೆ ನಿರ್ಭೀತಿಯಿಂದ ಜಿಗಿದಿರುವ ಶತಾಯುಷಿ ಮ್ಯಾನೆಟ್ ಬೈಲಿಯವರು 6,900 ಅಡಿಗಳನ್ನು ಪೂರ್ಣಗೊಳಿಸಿದ ಬ್ರಿಟನ್‍ನ ಅತ್ಯಂತ ಹಳೆಯ ಸ್ಕೈಡೈವರ್ ಎಂವ ಹೆಗ್ಗಳಿಕೆಗೆ ಪಾತ್ರರಾದರು.
ವಯಸ್ಸಾದ ಮಹಿಳೆಯೊಬ್ಬರು ಸ್ಕೈಡೈವಿಂಗ್ ಮಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಆಕೆ ತನ್ನ ತರಬೇತಿದಾರನೊಂದಿಗೆ ವಿಮಾನದಿಂದ ಜಿಗಿದಿರುವುದನ್ನು ತೋರಿಸುತ್ತದೆ. ಸ್ವಲ್ಪ ಸಮಯದ ನಂತರ ಸುರಕ್ಷಿತವಾಗಿ ಇಳಿದು ಜನರೊಂದಿಗೆ ಸಂಭ್ರಮಿಸಿ. ಅವರ ಅನುಭವ ಅದ್ಭುತವಾಗಿದೆ ಎಂದು ಅವರು ಹೇಳುತ್ತಾರೆ.