ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೋಹನ್‌ಲಾಲ್ ನಟನೆಯ ಎಂಪುರಾನ್ ಸಿನಿಮಾದ ರಿಲೀಸ್‌ಗಾಗಿ ಬೆಂಗಳೂರಿನ ಕಾಲೇಜು ಅಚ್ಚರಿ ಎನ್ನುವಂಥ ನಿರ್ಧಾರ ತೆಗೆದುಕೊಂಡಿದೆ. ಸಿನಿಮಾ ಬಿಡುಗಡೆ ಆಗುವ ಹೊತ್ತಿನಲ್ಲಿ ಮೋಹನ್‌ಲಾಲ್ ಸಿನಿಮಾವನ್ನು ಸಂಭ್ರಮಿಸಬೇಕು ಎನ್ನುವ ಕಾರಣಕ್ಕೆ ಯಾರೂ ನಿರೀಕ್ಷೆಯೇ ಮಾಡದಂಥ ನಿರ್ಧಾರವನ್ನು ತೆಗೆದುಕೊಂಡಿದೆ.
ಬೆಂಗಳೂರಿನ ಗುಡ್ ಶೆಫರ್ಡ್ ಕಾಲೇಜು ಮೋಹನ್‌ಲಾಲ್ ನಟನೆಯ ಎಂಪುರಾನ್ ಸಿನಿಮಾದ ಬಿಡುಗಡೆ ದಿನಾಂಕವಾದ ಮಾರ್ಚ್ 27ಅನ್ನು ಅಧಿಕೃತ ರಜಾ ದಿನವನ್ನಾಗಿ ಘೋಷಣೆ ಮಾಡಿದೆ.
ಸಂಸ್ಥೆಯ ಚೇರ್ಮನ್ ಮೋಹನ್‌ಲಾಲ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಅದೇ ಕಾರಣಕ್ಕೆ ಈ ನಿರ್ಧಾರ ಮಾಡಿದ್ದಾರೆ. ಮಲಯಾಳಂ ಸೂಪರ್‌ಸ್ಟಾರ್‌ಗೆ ತಮ್ಮ ಟ್ರಿಬ್ಯೂಟ್ ಅನ್ನೋ ರೀತಿಯಲ್ಲಿ ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.