ಆ ಫ್ಲಾಟ್‌ಗೆ ಎರಡು ಬಾರಿ ಹೋಗಿದ್ದೆ.. ಅಫ್ತಾಬ್ ಭಯಾನಕ ಹಿನ್ನೆಲೆ ತಿಳಿದು ಶಾಕ್‌ ಆದ ಹೊಸ ಗರ್ಲ್‌ ಫ್ರೆಂಡ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಫ್ತಾಬ್ ಪೂನಾವಾಲಾ ತನ್ನ ಲಿವ್-ಇನ್ ಪಾಲುದಾರ ಶ್ರದ್ಧಾ ವಾಲ್ಕರ್ ಳನ್ನು ಕೊಲೆ ಮಾಡಿದ ಒಂದೊಂದೇ ಸಂಗತಿಗಳು ಬಯಲಾಗುತ್ತಿದ್ದಂತೆ ಆತನೊಂದಿಗೆ ಡೇಟಿಂಗ್ ಮಾಡಿದ ಹೊಸ ಗರ್ಲ್‌ ಪ್ರೆಂಡ್  ಆತನ ಭಯಾನಕ ಕೃತ್ಯದ ಬಗ್ಗೆ ತಿಳಿದು ಆಘಾತಕ್ಕೊಳಗಾಗಿದ್ದಾಳೆ.
ಕೊಲೆಯ ನಂತರ ಎರಡು ಬಾರಿ ಅಲ್ಲಿಗೆ ಭೇಟಿ ನೀಡಿದಾಗ ತನ್ನ ಫ್ಲಾಟ್‌ನಲ್ಲಿ ಮಾನವ ದೇಹದ ಭಾಗಗಳನ್ನು ಇರಿಸಲಾಗಿತ್ತು ಎಂಬ ಸುಳಿವು‌ ಸಹ ತನಗೆ ಇರಲಿಲ್ಲ ಎಂದು ಅವಳು ಹೇಳಿದ್ದಾಳೆ.
ಅಫ್ತಾಬ್ ಅಕ್ಟೋಬರ್ 12 ರಂದು ತನಗೆ ಅಲಂಕಾರಿಕ ಉಂಗುರವೊಂದನ್ನು ಉಡುಗೊರೆಯಾಗಿ ನೀಡಿದ್ದ ಎಂದು ಅವಳು ತಿಳಿಸಿದ್ದಾಳೆ. ಮೂಲಗಳ ಪ್ರಕಾರ ಈ ಉಂಗುರವು ಶ್ರದ್ಧಾಗೆ ಸೇರಿದೆ. ಇದನ್ನು ಈಗ ಅಫ್ತಾಬ್‌ನ ಹೊಸ ಗೆಳತಿಯಿಂದ ವಶಕ್ಕೆ ಪಡೆಯಲಾಗಿದೆ ಮತ್ತು ಆಕೆಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ ಆಕೆ ವೃತ್ತಿಯಲ್ಲಿ ಮನೋವೈದ್ಯೆ.
ಆಕೆ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ʼತಾನು ಅಕ್ಟೋಬರ್‌ನಲ್ಲಿ ಎರಡು ಬಾರಿ ಅಫ್ತಾಬ್‌ನ ಫ್ಲಾಟ್‌ಗೆ ಭೇಟಿ ನೀಡಿದ್ದೆ. ಆದರೆ ಅಲ್ಲಿ ಕೊಲೆಯ ಬಗ್ಗೆ ಅಥವಾ ಮನೆಯಲ್ಲಿ ದೇಹದ ಭಾಗಗಳ ಉಪಸ್ಥಿತಿಯ ಬಗ್ಗೆ ತನಗೆ ಯಾವುದೇ ಸುಳಿವು ಇರಲಿಲ್ಲ. ಅಫ್ತಾಬ್ ಎಂದಿಗೂ ಭಯಭೀತನಾಗಿ ಕಾಂಡಿರಲಿಲ್ಲ. ಆದರೆ ಆಗಾಗ್ಗೆ ತನ್ನ ಮುಂಬೈನ ಮನೆಯ ಬಗ್ಗೆ ಹೇಳುತ್ತಿದ್ದ ಎಂದು ಅವಳು ಹೇಳಿದ್ದಾಳೆ. ಮಹಿಳೆ ಅಫ್ತಾಬ್ ನನ್ನು ಡೇಟಿಂಗ್ ಆಪ್ ನಲ್ಲಿ ಭೇಟಿಯಾಗಿದ್ದಳು.
ಅಫ್ತಾಬ್ ವಿವಿಧ ಡೇಟಿಂಗ್ ಸೈಟ್‌ಗಳ ಮೂಲಕ ಸುಮಾರು 15 ರಿಂದ 20 ಹುಡುಗಿಯರೊಂದಿಗೆ ಸಂಪರ್ಕ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ಸಂದರ್ಭದಲ್ಲಿ, ಪೊಲೀಸರು ಆತನ ಬಂಬಲ್ ಆ್ಯಪ್ ದಾಖಲೆಯನ್ನು ಪರಿಶೀಲಿಸಿದಾಗ ಶ್ರದ್ಧಾ ಕೊಲೆಯಾದ ಸುಮಾರು 12 ದಿನಗಳ ನಂತರ ಮೇ 30 ರಂದು ಅವನು ಸಂಪರ್ಕಕ್ಕೆ ಬಂದ ಯುವತಿಯ ಬಗ್ಗೆ ತಿಳಿದಿತ್ತು.
ಅವನ ನಡವಳಿಕೆಯು ಸಾಮಾನ್ಯವಾಗಿತ್ತು. ಕಾಳಜಿಯುಳ್ಳದ್ದಾಗಿತ್ತು. ಅವನ ಮಾನಸಿಕ ಸ್ಥಿತಿಯು ಸರಿಯಿಲ್ಲ ಎಂದು ತನಗೆ ಎಂದೂ ಅನಿಸಿರಲಿಲ್ಲ ಎಂದು ಅವಳು ಹೇಳಿದ್ದಾಲೆ. ಅಫ್ತಾಬ್‌ ಬಳಿ ಡಿಯೋಡರೆಂಟ್‌ಗಳು ಮತ್ತು ಸುಗಂಧ ದ್ರವ್ಯಗಳ ಸಂಗ್ರಹವಿತ್ತು. ಆತ ಆಗಾಗ್ಗೆ ಸುಗಂಧ ದ್ರವ್ಯಗಳನ್ನು ಉಡುಗೊರೆಯಾಗಿ ನೀಡುತ್ತಿದ್ದ ಎಂದು ಅವಳು ನೆನಪಿಸಿಕೊಂಡಿದ್ದಾಳೆ.
ಅಫ್ತಾಬ್ ತುಂಬಾ ಧೂಮಪಾನ ಮಾಡುತ್ತಿದ್ದ. ಮೇಲಿಂದ ಮೇಲೆ ಸಿಗರೇಟ್ ಉರಿಸುತ್ತಿದ್ದ. ಆದರೆ ಆಗಾಗ್ಗೆ ಧೂಮಪಾನವನ್ನು ತ್ಯಜಿಸುವ ಬಗ್ಗೆ ಮಾತನಾಡುತ್ತಿದ್ದ. ತಾನು ಹೋಗಿದ್ದ ವೇಳೆ ವಿವಿಧ ರೆಸ್ಟೋರೆಂಟ್‌ಗಳಿಂದ ಮಾಂಸಾಹಾರಿ ವಸ್ತುಗಳನ್ನು ಆರ್ಡರ್‌ ಮಾಡಿದ್ದ ಎಂದು ಆಕೆ ಹೇಳಿದ್ದಾಳೆ. ಕೊಲೆ ಪ್ರಕರಣದ ವಿವರಗಳು ಹೊರಬಿದ್ದ ನಂತರ ಆಘಾತಕ್ಕೊಳಗಾದ ಆಕೆಗೆ ಈಗ ಕೌನ್ಸೆಲಿಂಗ್ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!