ಕಾಂತಾರ ಕಂಡು ಕನ್ನಡ ಚಿತ್ರರಂಗಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಕೊಟ್ಟ ಸಲಹೆ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ಯಶಸ್ಸಿಯತ್ತ ಸಾಗುತ್ತಿದ್ದು, ಎಲ್ಲ ವರ್ಗದ ಪ್ರೇಕ್ಷಕರೂ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.

ನಟರು, ಸಾಹಿತಿಗಳು, ಚಿಂತಕರು, ಕೆಲವು ರಾಜಕಾರಣಿಗಳು ಸಹ ಕಾಂತಾರ ಸಿನಿಮಾ ವೀಕ್ಷಿಸಿ ವಿಮರ್ಶಿಸಿದ್ದಾರೆ.
ಇದೀಗ ಹಾಸನ ಕ್ಷೆತ್ರದ ಸಂಸದ ಪ್ರಜ್ವಲ್ ರೇವಣ್ಣ ಕಾಂತಾರ ಸಿನಿಮಾ ವೀಕ್ಷಿಸಿದ್ದು, ಕನ್ನಡ ಚಿತ್ರರಂಗಕ್ಕೆ ಸಲಹೆಯೊಂದನ್ನು ನೀಡಿದ್ದಾರೆ.

ಕನ್ನಡದ ಕಾಂತಾರ ಚಿತ್ರವನ್ನು ವೀಕ್ಷಿಸಿದೆ, ರಿಷಬ್ ಶೆಟ್ಟಿ ಅವರು ಅದ್ಬುತವಾಗಿ ನಟಿಸಿದ್ದಾರೆ, ಕಾಡಿನ ಜನರ ಅಳಿವು ಉಳಿವಿನ ಹೋರಾಟ ಒಂದೆಡೆಯಾದರೆ, ನಾಡಿನ ಬಂಡವಾಳಶಾಹಿಗಳ ಕರಾಳತೆ ಮತ್ತೊಂದೆಡೆ ಇವೆಲ್ಲವನ್ನೂ ನಿರ್ದೇಶಕರು ಅದ್ಭುತವಾಗಿ ಚಿತ್ರಿಸಿದ್ದಾರೆ ಎಂದಿದ್ದಾರೆ.

ಕರಾವಳಿಯ ದೈವಾರಾಧನೆ ಮತ್ತು ಕರ್ನಾಟಕದ ಭವ್ಯ ಸಾಂಸ್ಕೃತಿಕ ಪರಂಪರೆ ಎಂತದ್ದು ಅನ್ನೋದನ್ನು ರಿಷಬ್ ಶೆಟ್ಟಿ ಅವರು ತೀರಾ ಸರಳವಾಗಿ ಅಚ್ಚುಕಟ್ಟಾಗಿ ವಿವರಿಸಿದ್ದಾರೆ, ವಿವಿಧತೆಯಲ್ಲಿ ಏಕತೆಯನ್ನು ಹೊತ್ತು ಸಾಗುತ್ತಿರುವ ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಭಾರತಕ್ಕೆ ಮಾರ್ಗದರ್ಶನ ನೀಡುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ ಎಂದಿದ್ದಾರೆ.

ಒಟ್ಟಾರೆಯಾಗಿ ಕಾಂತಾರ, ನಾಡಿನ ಅಸ್ಮಿತೆಯನ್ನು ಬಿಂಬಿಸುವ ಕನ್ನಡದ ಚಿತ್ರ ಎಂದರೆ ತಪ್ಪಾಗಲಾರದು. ವಿವಿಧತೆಯಲ್ಲಿ ಏಕತೆಗೆ ಹೆಸರಾಗಿರುವ ಕರ್ನಾಟಕದಲ್ಲಿ ಇನ್ನೂ ಅದೆಷ್ಟೋ ವಿಭಿನ್ನ ಸಂಸೃತಿಗಳಿವೆ ಅವೆಲ್ಲವನ್ನೂ ಕನ್ನಡ ಚಿತ್ರರಂಗ ಬಳಸಿಕೊಂಡು ಚಲನಚಿತ್ರಗಳನ್ನು ರೂಪಿಸಿದರೆ ಕರ್ನಾಟಕದ ಭವ್ಯ ಸಾಂಸ್ಕೃತಿಕ ಪರಂಪರೆ ಇಡೀ ವಿಶ್ವಕ್ಕೇ ಪರಿಚಯವಾಗಲಿದೆ. ಕಾಂತಾರ ಚಿತ್ರತಂಡದವರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಜೊತೆಗೆ ಚಿತ್ರ ಇನ್ನಷ್ಟು ಯಶಸ್ಸು ಕಂಡು ಜನರ ಮನ್ನಣೆಯನ್ನು ಗಳಿಸಲಿ ಎಂದು ಹಾರೈಸುತ್ತೇನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!