ಪೈಲ್ಸ್‌ನ ಲಕ್ಷಣಗಳೇನು, ಇದಕ್ಕೆ ಕಾರಣಗಳೇನು? ಪರಿಹಾರ ಏನು? ಇಲ್ಲಿದೆ ಮಾಹಿತಿ..

ಇಂದು ವಿಶ್ವ ಪೈಲ್ಸ್ ದಿನ. ಭಾರತದಲ್ಲಿ ಸಾಕಷ್ಟು ಮಂದಿ ಪೈಲ್ಸ್ ಸಮಸ್ಯೆ ಅನುಭವಿಸುತ್ತಿದ್ದು, ಬದಲಾದ ಜೀವನಶೈಲಿ, ಆಹಾರ ಪದ್ಧತಿ ಪೈಲ್ಸ್‌ಗೆ ಕಾರಣ ಎಂದು ವೈದ್ಯರು ಹೇಳುತ್ತಾರೆ.

ಪೈಲ್ಸ್‌ನ ಲಕ್ಷಣಗಳೇನು?

  • ಮಲವಿಸರ್ಜನೆ ನಂತರ ಕಮೋಡ್ ಕೆಂಪು ಬಣ್ಣದಲ್ಲಿ ಕಾಣುವುದು
  • ಗುದದ್ವಾರದಲ್ಲಿ ಕೆರೆತ
  • ಟಾಯ್ಲೆಟ್‌ಗೆ ಹೋಗಿ ಬಂದ ನಂತರವೂ ಸರಿಯಾಗಿ ಮಲವಿಸರ್ಜನೆ ಮಾಡಿಲ್ಲ ಎನಿಸುವುದು.
  • ಕೆಳಭಾಗ ಒರೆಸಿದಾಗ ಅಥವಾ ಒಳಉಡುಪಿನಲ್ಲಿ ಮ್ಯೂಕಸ್, ಲೋಳೆಯಂಥ ಪದಾರ್ಥ ಕಾಣಿಸುವುದು
  • ಗುದದ್ವಾರದ ಸುತ್ತಮುತ್ತ ಗಂಟುಗಳು
  • ಗುದದ್ವಾರದ ಸುತ್ತ ನೋವು
  • ಗುದದ್ವಾರ ಊದಿದ ಹಾಗೆ ಅನಿಸುವುದು
  • ಕಷ್ಟಪಟ್ಟು ಮಲವಿಸರ್ಜನೆ ಮಾಡುವುದು
  • ಮಲದಲ್ಲಿ ಹೆಚ್ಚು ರಕ್ತ ಕಾಣಿಸುವುದು

    ಪೈಲ್ಸ್‌ಗೆ ಕಾರಣ ಏನು?

  • ಕಷ್ಟಪಟ್ಟು ಮಲವಿಸರ್ಜನೆ ಮಾಡುವುದು
  • ಟಾಯ್ಲೆಟ್‌ನಲ್ಲಿ ಕುಳಿತುಕೊಂಡು ಹೆಚ್ಚು ಕಾಲ ಕಳೆಯುವುದು
  • ಗಟ್ಟಿಯಾದ ಮಲವಿಸರ್ಜನೆ
  • ತೂಕ ಹೆಚ್ಚಿರುವುದು
  • ನೀರು ಕಡಿಮೆ ಕುಡಿಯುವುದು
  • ಪ್ರೆಗ್ನೆನ್ಸಿ
  • ನಾರಿನಂಶ ಇರದ ಪದಾರ್ಥವನ್ನೇ ಸೇವಿಸುವುದು
  • ದಿನವೂ ಹೆಚ್ಚು ತೂಕ ಹೊರುವ ಕೆಲಸ ಮಾಡುವುದು

    ಏನೇನು ಮಾಡಬೇಕು?

  • ಹೆಚ್ಚು ನಾರಿನಂಶ ಇರುವ ಆಹಾರ ಸೇವನೆ ಮಾಡಿ.
  • ಹೆಚ್ಚು ನೀರು ಕುಡಿಯಿರಿ
  • ಫೈಬರ್ ಸಪ್ಲಿಮೆಂಟ್ಸ್ ಬಳಸಿ
  • ಟಾಯ್ಲೆಟ್ ರೂಂನಲ್ಲಿ ಹೆಚ್ಚು ಕಷ್ಟಪಟ್ಟು ತಿಣುಕಿ ಮಲವಿಸರ್ಜನೆ ಮಾಡಬೇಡಿ
  • ಅರ್ಜೆಂಟ್ ಆದ ತಕ್ಷಣವೇ ಟಾಯ್ಲೆಟ್‌ಗೆ ಹೋಗಿ, ಬ್ಯುಸಿ ಇದ್ದೇವೆಂದು ತಡೆಹಿಡಿದು ಕೂರಬೇಡಿ
  • ವ್ಯಾಯಾಮ ಮಾಡುವುದು ಒಳ್ಳೆಯದು
  • ಟಾಯ್ಲೆಟ್ ಮಾಡುವ ಪೊಸಿಶನ್‌ನಲ್ಲಿ ಬಹುಕಾಲ ಕೂರಬೇಡಿ, ಇದು ವೇನ್ಸ್‌ನಲ್ಲಿ ಹೆಚ್ಚು ಪ್ರೆಶರ್ ಬೀಳುವಂತೆ ಮಾಡುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!