ದೇಹದಲ್ಲಿ ಅಯೋಡಿನ್ ಕೊರತೆಯು ಅನೇಕ ರೋಗಗಳಿಗೆ ಕಾರಣವಾಗಬಹುದು. ಇವುಗಳಲ್ಲಿ ಅಯೋಡಿನ್ ಕೊರತೆಯ ಸಿಂಡ್ರೋಮ್ ಕೂಡ ಸೇರಿದೆ.
ಗರ್ಭಿಣಿ ಮಹಿಳೆಯಲ್ಲಿ ಅಯೋಡಿನ್ ಕೊರತೆಯಿದ್ದರೆ, ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಈ ಗರ್ಭಿಣಿಯರಲ್ಲಿ ಅಯೋಡಿನ್ ಕೊರತೆ ಕಂಡು ಬಂದರೆ ಗರ್ಭಪಾತ, ಅಂಗವಿಕಲ ಶಿಶು, ನವಜಾತ ಶಿಶುವಿನಲ್ಲಿ ಗಳಗಂಡ ಹಾಗೂ ಮಕ್ಕಳಲ್ಲಿ ಕುಬ್ಜತೆ, ಶತ ದಡ್ಡತನ, ಮೆಳ್ಳೆಗಣ್ಣು, ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ನಿಧಾನವಾಗುತ್ತದೆ.
ಕಿವುಡುತನ, ಲೈಂಗಿಕ ಬೆಳವಣಿಗೆ ಆಗದಿರುವುದು, ತೊದಲುವಿಕೆ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದಲ್ಲದೇ, ದೊಡ್ಡವರಲ್ಲಿ ಗಳಗಂಡ, ಗೊಗ್ಗರು ಧ್ವನಿ, ದೇಹದಲ್ಲಿ ಬಾವು, ಕೊಲೆಸ್ಟ್ರಾಲ್ ಹೆಚ್ಚಳ, ಚುರುಕುತನ ನಾಶವಾಗಿ ಮಂದತೆ ಆವರಿಸುವುದು, ಸ್ಥೂಲಕಾಯ, ಲೈಂಗಿಕ ನಿರಾಸಕ್ತಿಯಂತಹ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಈ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಡೆಯುವ ಉತ್ತಮ ಮಾರ್ಗವೆಂದರೆ ಪ್ರತಿದಿನ ಸೀಮಿತ ಪ್ರಮಾಣದಲ್ಲಿ ಅಯೋಡಿನ್ ಉಪ್ಪನ್ನು ಸೇವಿಸುವುದು.
ಆಲೂಗಡ್ಡೆಯನ್ನು ಸಿಪ್ಪೆಯೊಂದಿಗೆ ತಿನ್ನುವುದರಿಂದ ದೇಹಕ್ಕೆ ಬೇಕಾಗುವ ಅಯೋಡಿನ್ ದೊರೆಯುತ್ತದೆ. ಈ ಸಿಪ್ಪೆಯು ಹೆಚ್ಚು ಅಯೋಡಿನ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಗಳಿಂದ ಸಮೃದ್ಧವಾಗಿದೆ. ಹಾಲು, ಒಣದ್ರಾಕ್ಷಿ, ಮೊಸರು, ಕಂದು ಅಕ್ಕಿ, ಸಮುದ್ರದ ಮೀನು, ಉಪ್ಪು, ಕಾಡ್‌ಲಿವರ್ ಆಯಿಲ್, ಮಾಂಸ, ಮೊಟ್ಟೆ, ಧಾನ್ಯ-ಬೇಳೆಕಾಳು, ಸೊಪ್ಪು-ಪಾಲಾಕ್, ರಾಗಿ, ಸಾಸಿವೆ, ಜೋಳ, ಶೇಂಗ ಹಾಗೂ ಉದ್ದು ಈ ಆಹಾರಗಳನ್ನು ಸೇವಿಸುವ ಮೂಲಕ ದೇಹದಲ್ಲಿನ ಅಯೋಡಿನ್ ಕೊರತೆಯನ್ನು ನೀಗಿಸಿಕೊಳ್ಳಬಹುದು.
ಅಯೋಡಿನ್ ಕೊರತೆಯ ಲಕ್ಷಣಗಳು
ಸುಸ್ತು
ತೂಕ ಏರಿಕೆ
ಯಾವಾಗಲು ಚಳಿಯಾಗುವುದು
ಮುಖ ಊದಿದಂತೆ ಕಾಣುವುದು
ಡ್ರೈ ಸ್ಕಿನ್
ಕೂದಲು ಉದುರುವಿಕೆ
ಸದಾ ಕನ್ಫ್ಯೂಷನ್
ಕಾನ್ಸಂಟ್ರೇಟ್ ಮಾಡುವಲ್ಲಿ ಸಮಸ್ಯೆ
ವೀಕ್ ಹಾರ್ಟ್ ಬೀಟ್
ಡಿಪ್ರೆಶನ್