ಅಸಲಿಗೆ ನಮೀಬಿಯಾದಿಂದ ಬಂದಿದ್ದ ಚಿರತೆ ಸಾವಿಗೆ ಕಾರಣವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡನೇ ಚೀತಾ ಮೃತಪಟ್ಟಿದ್ದು, ಚೀತಾ ಸಾವಿಗೆ ಹೃದಯ ಹಾಗೂ ಶ್ವಾಸಕೋಶದ ವೈಫಲ್ಯ ಕಾರಣ ಎಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ತರಿಸಲಾಗಿದ್ದ 12 ಚೀತಾಗಳ ಪೈಕಿ ಉದಯ್ ಹೆಸರಿನ ಗಂಡು ಚೀತಾ ಮೃತಪಟ್ಟಿತ್ತು.

ಎರಡನೇ ಚೀತಾ ಮೃತಪಟ್ಟ ಕಾರಣ ಸ್ಥಳಾಂತರಕ್ಕೆ ಒತ್ತಾಯ ಮಾಡಲಾಗಿತ್ತು. ಈ ಬೆನ್ನಲ್ಲೇ ಚೀತಾ ಹೃದಯ ಹಾಗೂ ಶ್ವಾಸಕೋಶದ ವೈಫಲ್ಯದಿಂದ ಮೃತಪಟ್ಟಿರುವ ಬಗ್ಗೆ ವೈದ್ಯರು ಸ್ಪಷ್ಟನೆ ನೀಡಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆಸಿದ್ದು, ಜಬಲ್‌ಪುರ ಮತ್ತು ಭೋಪಾಲ್‌ನ ತಲಾ ಒಬ್ಬ ವಿಧಿವಿಜ್ಞಾನ ತಜ್ಞರನ್ನೊಳಗೊಂಡ ಐವರ ತಜ್ಞರ ಸಮಿತಿ ಮರಣೋತ್ತರ ಪರೀಕ್ಷೆ ನಡೆಸಿದೆ.

ಸಂಜೆವರೆಗೂ ಚೀತಾ ಆರೋಗ್ಯವಾಗಿತ್ತು, ಆದರೆ ಮರುದಿನ ಅಸ್ವಸ್ಥಗೊಂಡಿದ್ದನ್ನು ನೋಡಿ ಚಿಕಿತ್ಸೆ ಆರಂಭಿಸಲಾಗಿತ್ತು. ಸಂಜೆ ವೇಳೆಗೆ ಚೀನಾ ಮೃತಪಟ್ಟಿತ್ತು. ಈ ಹಿಂದೆ ನಮೀಬಿಯಾದಿಂದ ತಂದಿದ್ದ ಸಾಶಾ ಹೆಸರಿನ ಹೆಣ್ಣು ಚಿರತೆ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!