ಯಾವ ಬಟ್ಟೆ ಹಾಕಬೇಕು ಅನ್ನೋದು ಮಹಿಳೆಯರಿಗೆ ಬಿಟ್ಟಿದ್ದು: ಹಿಜಾಬ್ ವಿವಾದದ ಬಗ್ಗೆ ಪ್ರಿಯಾಂಕಾ ಗಾಂಧಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ನಡೆಯುತ್ತಿರೋ ಹಿಜಾಬ್ ವಿವಾದದ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.

ಬಿಕಿನಿ ಹಾಕೋದು, ಗೂಂಘಟ್ ಹಾಕೋದು, ಜೀನ್ಸ್ ಹಾಕೋದು ಅಥವಾ ಹಿಜಾಬ್ ಹಾಕೋದು. ಎಲ್ಲವೂ ಹೆಣ್ಣುಮಕ್ಕಳಿಗೆ ಬಿಟ್ಟದ್ದು. ಅವರು ಏನು ಧರಿಸಬೇಕು ಎನ್ನುವುದು ಅವರ ಆಯ್ಕೆ, ಅವರ ಹಕ್ಕು. ಭಾರತ ಸಂವಿಧಾನವೇ ಇದಕ್ಕೆ ಹಕ್ಕು ನೀಡಿದೆ. ಬಟ್ಟೆ ವಿಷಯದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ ಎಂದು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!