Thursday, March 30, 2023

Latest Posts

ಉರ್ಫಿ ಜಾವೇದ್ ಕುರಿತು ಬಾಲಿವುಡ್ ನಟ ರಣಬೀರ್ ಕಪೂರ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಉರ್ಫಿ ಜಾವೇದ್ (Urfi Javed) ಕುರಿತು ನಟ ರಣಬೀರ್ ಕಪೂರ್ (Ranbir Kapoor) ಕಾಮೆಂಟ್ ಮಾಡಿದ್ದಾರೆ.

ಸಂದರ್ಶನದಲ್ಲಿ ರಣಬೀರ್ ಕಪೂರ್ ಗೆ ಪ್ರಶ್ನೆ ಮಾಡುವ ಕರೀನಾ, ‘ಫ್ಯಾಷನ್ ವಿಷಯದಲ್ಲಿ ಉರ್ಫಿ ಬಗ್ಗೆ ಏನು ಹೇಳುತ್ತೀರಿ? ಅವರ ಫ್ಯಾಷನ್ ಗೆ ನೀವು ಅಭಿಮಾನಿಯಾ?’ ಎಂದು ಪ್ರಶ್ನೆ ಮಾಡುತ್ತಾರೆ. ಈ ಪ್ರಶ್ನೆಗೆ ಉತ್ತರಿಸುವ ರಣಬೀರ್ ‘ನಾನು ಅವಳ ಫ್ಯಾಷನ್ ಗೆ ಕಂಡಿತಾ ಅಭಿಮಾನಿಯಲ್ಲ. ಅಸಲಿಯಾಗಿ ಅದು ಫ್ಯಾಷನ್ ಅಲ್ಲ. ಅವಳ ಕೆಟ್ಟ ಅಭಿರುಚಿ’ ಎಂದು ಉತ್ತರಿಸಿದ್ದಾರೆ .

ಉರ್ಫಿ ಜಾವೇದ್ ಬಗ್ಗೆ ರಣಬೀರ್ ಆಡಿರುವ ಮಾತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಮಾತಿಗೆ ಉರ್ಫಿ ಯಾವ ರೀತಿಯಲ್ಲಿ ತಿರುಗೇಟು ನೀಡುತ್ತಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲ.

ಉರ್ಫಿ ವಿಚಿತ್ರ ಕಾಸ್ಟ್ಯೂಮ್ ಗಳಿಂದ ಸದಾ ಸುದ್ದಿಯಲ್ಲಿ ಇರುತ್ತೇವೆ. ಅರೆಬರೆ ಬಟ್ಟೆ ಹಾಕಿಕೊಂಡು ಬೀದಿಗಿಳಿಯುವ ಅವರ ಬಗ್ಗೆ ಈಗಾಗಲೇ ಹಲವು ದೂರುಗಳು ಕೂಡ ದಾಖಲಾಗಿವೆ. ಪೊಲೀಸ್ ಠಾಣೆ ಮೆಟ್ಟಿಲನ್ನೂ ಅವರು ಏರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!