Tuesday, March 28, 2023

Latest Posts

ಕಾಂತಾರ ಸಕ್ಸಸ್ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಕಾಂತಾರ (KANTARA) ಸಿನಿಮಾ ಸಕ್ಸಸ್ ಬಗ್ಗೆ ಮಾತನಾಡಿದ್ದಾರೆ.

ಇಂದು ಕನ್ನಡ ಮತ್ತು ಸೌತ್ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾವಾಗಿ ಗೆಲ್ಲುತ್ತಿದೆ. ಹೀಗಾಗಿ ಇತ್ತೀಚಿಗೆ ಕಾರ್ಯಕ್ರಮದಲ್ಲಿವೊಂದರಲ್ಲಿ ಭಾಗವಹಿಸಿದ ಸುದೀಪ್‌ಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಹೇಗೆ ಗೆಲ್ಲುತ್ತವೆ, ಯಾವ ಚಿತ್ರಗಳನ್ನು ಪ್ಯಾನ್ ಇಂಡಿಯಾ ಮಾಡಬೇಕು ಎಂಬುದನ್ನು ನಿರ್ಧರಿಸುವುದು ಹೇಗೆ, ಇದರ ಒತ್ತಡ ನಿರ್ಮಾಪಕರ ಮೇಲೆ ಯಾವ ರೀತಿ ಬೀಳಲಿದೆ ಎಂಬ ಪ್ರಶ್ನೆ ಎದುರಾಯಿತು.

ಈ ಪ್ರಶ್ನೆಗಳಿಗೆ ಉತ್ತರಿಸಲು ಆರಂಭಿಸಿದ ಸುದೀಪ್ ಚೈನೀಸ್ ಸಿನಿಮಾಗಳನ್ನು ಉದಾಹರಣೆಯಾಗಿ ನೀಡಿದರು. ಬೇರೆ ಭಾಷೆಗಳಿಗೆ ಡಬ್ ಮಾಡಿ ವಿಶ್ವದಾದ್ಯಂತ ತಮ್ಮ ಸಿನಿಮಾಗಳು ಹಬ್ಬುವಂತೆ ಮಾಡಿದರು. ಇಂಗ್ಲಿಷ್ ಭಾಷೆಗೆ ಡಬ್ ಆದ ಚೈನೀಸ್ ಭಾಷೆಗಳು ದೇಶದೆಲ್ಲೆಡೆ ಗೆದ್ದವು, ಪ್ರೇಕ್ಷಕನಿಗೆ ಹೊಸತನ್ನು ನೋಡುವ ಬಯಕೆ ಇರುತ್ತದೆ. ಹಾಗಾಗಿಯೇ ಹೊಸತನದಿದ್ದ ಚೈನೀಸ್ ಕೊರಿಯನ್ ಚಿತ್ರಗಳನ್ನು ಭಾರತದ ಅಭಿಮಾನಿಗಳು ಮೆಚ್ಚಿಕೊಂಡರು ಎಂದು ಕಿಚ್ಚ ಮಾತನಾಡಿದ್ದಾರೆ.

ಇದೇ ವೇಳೆ `ಕಾಂತಾರ’ (KANTARA) ಚಿತ್ರ ಒಂದು ಕನ್ನಡ ಚಿತ್ರ, ಕರ್ನಾಟಕದ (Karnataka) ಆಚರಣೆಯಾದ ಭೂತಕೋಲದ ಕಥೆ ಇರುವ ಚಿತ್ರ, ಈ ಚಿತ್ರವನ್ನು ಉತ್ತರ ಪ್ರದೇಶದ ಸಿನಿ ರಸಿಕ ಮೆಚ್ಚಿಕೊಳ್ಳಲು ಕಾರಣವೇನು ಎಂಬ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುದೀಪ್ ʻಕಾಂತಾರʼ ನಮ್ಮ ನಾಡಿನ ಕಥೆಯಾದರೂ ಬೇರೆ ಭಾಷೆಯ ಜನರಿಗೆ ಹೊಸತು, ಸಾಮಾನ್ಯ ಕಥೆಗಳನ್ನು ನೋಡಿರುವ ಸಿನಿ ರಸಿಕರಿಗೆ ಆ ಚಿತ್ರ ಹೊಸ ಅನುಭವವನ್ನು ನೀಡಿತು, ಅದು ಬೇರೆ ರಾಜ್ಯದ ಸಿನಿ ರಸಿಕರಿಗೆ ಹೊಸತು, ಹಾಗಾಗಿ ಗೆಲುವು ಕಂಡಿತು, ಪ್ಯಾನ್ ಇಂಡಿಯಾ ಚಿತ್ರಗಳು ಗೆಲ್ಲುವುದೇ ಈ ರೀತಿ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!