ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಡೀ ಸ್ಯಾಂಡಲ್‌ವುಡ್ ರಿಷಭ್ ಶೆಟ್ಟಿ ಅಭಿನಯದ ಕಾಂತಾರಾ ಸಿನಿಮಾ ನೋಡಿ ಭೇಷ್ ಎನ್ನುತ್ತಿದೆ.
ಇದೀಗ ನಟ ಪ್ರಭಾಸ್ ಕೂಡ ಸಿನಿಮಾ ನೋಡಿದ್ದು, ಕ್ಲೈಮಾಕ್ಸ್‌ನ ಫ್ಯಾನ್ ಆಗಿದ್ದಾರೆ.
ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು ಅವರು ಕಾಂತಾರಾ ಸಿನಿಮಾ ನಿರ್ಮಿಸಿದ್ದಾರೆ. ಪ್ರಭಾಸ್ ನಟನೆಯ ಸಲಾರ್ ಕೂಡ ಇದೇ ಬ್ಯಾನರ್‌ನಲ್ಲಿ ಬರಲಿದ್ದು, ಪ್ರಭಾಸ್‌ಗೋಸ್ಕರ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.
ಸಿನಿಮಾ ನೋಡಿದ ಪ್ರಭಾಸ್ ಚಿತ್ರ ತಂಡವನ್ನು ಹೊಗಳಿದ್ದು, ತುಂಬಾನೇ ಎಂಜಾಯ್ ಮಾಡಿದೆ. ಅದರಲ್ಲೂ ಕ್ಲೈಮಾಕ್ಸ್ ಬಗ್ಗೆ ಎರಡು ಮಾತಿಲ್ಲ. ಇಂಥ ಚಿತ್ರ ಕಟ್ಟಿಕೊಟ್ಟ ತಂಡಕ್ಕೆ ದೊಡ್ಡ ಯಶಸ್ಸು ಸಿಗಲಿ ಎಂದಿದ್ದಾರೆ.