ಮಗನನ್ನು ಸೇವ್‌ ಮಾಡೋದಕ್ಕಾಗಿ ದರೋಡೆಕೋರನ ಎದುರು ನಿಂತ ಸೈಫ್‌, ಆರೋಪಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಟ ಸೈಫ್‌ ಅಲಿ ಖಾನ್‌ ಮೇಲೆ ಚಾಕು ದಾಳಿ ಮಾಡಿದ್ದ ಆರೋಪಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆತನಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.

ದರೋಡೆಕೋರ ಎಸಿ ಡಕ್ಟ್‌ ಮೂಲಕ ಸೈಫ್‌ ಮನೆಗೆ ಬಂದಿದ್ದಾನೆ. ನಂತರ ಮನೆಯ ಕೆಲಸದವರು ಕಳ್ಳನನ್ನು ನೋಡಿದ್ದಾರೆ. ಈ ವೇಳೆ ಅವರು ಜೋರಾಗಿ ಕೂಗಿದ್ದಾರೆ. ಆ ವೇಳೆ ಮನೆಕೆಲಸದಾಕೆಯ ಕೈಗೆ ಇರಿದ ದರೋಡೆಕೋರ ಸೈಫ್‌ ಕಿರಿಯ ಪುತ್ರ ಜೇಹ್‌ ಕೋಣೆಗೆ ನುಗ್ಗಿದ್ದಾನೆ.

ಮಗನ ಕೋಣೆಗೆ ನುಗ್ಗಿದ ದರೋಡೆಕೋರ ಮಗನಿಗೆ ಏನಾದರೂ ಮಾಡಿಬಿಟ್ಟರೆ ಎನ್ನುವ ಭಯಕ್ಕೆ ಸೈಫ್‌ ರೂಮಿಗೆ ಹೋಗಿದ್ದಾರೆ. ಈ ವೇಳೆ ಸೈಫ್‌ ದರೋಡೆಕೋರನನ್ನು ಬಿಗಿಯಾಗಿ ಮುಂಬದಿಯಿಂದ ಹಿಡಿದುಕೊಂಡಿದ್ದಾರೆ. ಆಗ ದರೋಡೆಕೋರ ಬೆನ್ನಿಗೆ ಚಾಕು ಹಾಕಿ, ಓಡಿಹೋಗಿದ್ದಾನೆ ಎಂದು ಹೇಳಲಾಗಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!