ಚೀನಾದ ಹೊಸ ವೈರಸ್‌ ʼಲಾಂಗ್ಯಾʼ ಬಗ್ಗೆ ವೈಜ್ಞಾನಿಕವರದಿಗಳು ಹೇಳೋದೇನು ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಚೀನಾದ ವಿಜ್ಞಾನಿಗಳು ಇದೇ ಮೊದಲಬಾರಿಗೆ ಮನುಷ್ಯರಲ್ಲಿ ಸೋಂಕು ಕಾಣಿಸಿಕೊಂಡಿರುವ ಹೊಸ ವೈರಸ್‌ ಅನ್ನು ಪತ್ತೆ ಹಚ್ಚಿದ್ದಾರೆ. ಲಾಂಗ್ಯಾ ಎಂಬ ಹೆಸರಿನ ಚೀನಾದ ಈ ಹೊಸ ವೈರಸ್‌ ಕುರಿತಾಗಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಮತ್ತೆ ಒಂದಿಷ್ಟು ಭಯ ಆತಂಕಗಳು ಸಹಜವಾಗೇ ಹುಟ್ಟಿಕೊಂಡಿರುತ್ತದೆ. ಇದು ನೀಂಫಾವೈರಸ್‌ ಅಥವಾ ಹೆಂಡ್ರಾ ವೈರಸ್‌ ಗಳಂತೆ ತುಂಬಾ ಅಪಾಯಕಾರಿ ಎಂದೆಲ್ಲ ವದಂತಿಗಳು ಹಬ್ಬಿವೆ. ಆದರೆ ಅದಕ್ಕೂ ಮೊದಲು ಈ ವೈರಸ್‌ ಕುರಿತಾಗಿ ಕೆಲವ ವೈಜ್ಞಾನಿಕ ವಿಶ್ಲೇಷಕರು ಏನು ಹೇಳುತ್ತಾರೆ ಎಂಬುದು ಇಲ್ಲಿದೆ ನೋಡಿ.

ಇದು ಮೊದಲ ಬಾರಿಗೆ ಶ್ರೂಗಳಲ್ಲಿ(ಒಂದು ಜಾತಿಯ ಉದ್ದಮೂಗಿನ ಇಲಿಯಂತಿರುವ ಪ್ರಾಣಿ) ಕಾಣಿಸಿಕೊಂಡಿತು ಎಂದು ಪತ್ತೆ ಹಚ್ಚಲಾಗಿದೆ. ಇದು ಮೊದಲು 2018 ರ ಕೊನೆಯಲ್ಲಿ ಶಾಂಡೋಂಗ್ ಪ್ರಾಂತ್ಯದ ರೈತರೊಬ್ಬರಿಗೆ ಕಾಣಿಸಿಕೊಂಡಿತು. ಇದು ಮನುಷ್ಯರಿಂದ ಹರಡುವುದಿಲ್ಲ. ಬದಲಾಗಿ ಪ್ರಾಣಿಗಳಿಂದ ಹರಡುತ್ತದೆ ಎಂಬುದನ್ನು ಸಂಶೋಧನೆಗಳು ತೆರೆದಿಟ್ಟಿವೆ.

ಲಭ್ಯವಿರುವ ಮಾಹಿತಿ ಪ್ರಕಾರ ರೋಗಲಕ್ಷಣಗಳಲ್ಲಿ ಜ್ವರ, ತಲೆನೋವು, ಸ್ನಾಯು ನೋವು, ಆಯಾಸ, ಕೆಮ್ಮು ಮತ್ತು ವಾಕರಿಕೆ ಸೇರಿವೆ. ಈ ಲ್ಯಾಂಗ್ಯಾ ವೈರಸ್ ಸಾಮಾನ್ಯ ಜನರಿಗೆ ಬಹಳ ಕಡಿಮೆ ಅಪಾಯವನ್ನುಂಟುಮಾಡುತ್ತದೆ. ಇಲ್ಲಿಯವರೆಗೆ ಲಾಂಗ್ಯಾ ವೈರಸ್ ಸೋಂಕಿನಿಂದ ಯಾರೂ ಸಾವನ್ನಪ್ಪಿಲ್ಲ. ಹಾಗೂ ಮನುಷ್ಯರಿಂದ ಮನುಷ್ಯರಿಗೆ ನೇರವಾಗಿ ಹರಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳೂ ಇಲ್ಲ ಎಂದು ಸಾಂಕ್ರಾಮಿಕ ರೋಗ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದು ನೀಂಫಾ ಅಥವಾ ಹೆಂಡ್ರಾ ವೈರಸ್‌ ಗೆ ಸೇರಿದ ತಳಿಯೇ ಆದರೂ ಇದು ಅವುಗಳಷ್ಟು ಹೆಚ್ಚು ಅಪಾಯಕಾರಿಯಲ್ಲ. ಲ್ಯಾಂಗ್ಯಾ ವೈರಸ್ ಪತ್ತೆಯಾದವರಿಗೆ ಹೋಲಿಕೆ ಮಾಡಿದರೆ ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.

ಇವೆಲ್ಲವನ್ನೂ ಹೊರತು ಪಡಿಸಿ ಪ್ರಸ್ತುತ ನಾವಿರುವ ಕಾಲಘಟ್ಟವು ವೈಜ್ಞಾನಿಕವಾಗಿ ಸುಧಾರಿಸಿದ್ದು ಹೊಸ ಹೊಸ ರೋಗಗಳನ್ನು ಪತ್ತೆ ಹಚ್ಚಿ ಅದರ ಶಮನಕ್ಕಾಗಿ ಅತ್ಯಂತ ಕಡಿಮೆ ಸಮಯದಲ್ಲಿ ಪರಿಣಾಮಕಾರಿಯಾಗಿ ಲಸಿಕೆ ಪತ್ತೆ ಹಚ್ಚುವಲ್ಲಿ ಸಮರ್ಥವಾಗಿದೆ. ಹಾಗಾಗಿ ಈ ಹೊಸ ವೈರಸ್‌ ಗೆ ಕಂಗಾಲಾಗುವ ಅವಶ್ಯಕತೆಯೇನೂ ಇಲ್ಲ ಆದರೆ ಎಚ್ಚರಿಕೆ ಅಗತ್ಯವಂತೂ ಹೌದು ಎಂಬುದು ವೈಜ್ಞಾನಿಕ ವಿಶ್ಲೇಷಕರು ಹೇಳೋ ಸತ್ಯ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!