ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು 2025-26 ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಇದು ಅವರ 16ನೇ ಬಜೆಟ್ ಆಗಿದ್ದು, ರಾಜ್ಯದ ಒಟ್ಟು ಹಂಚಿಕೆ ₹4 ಲಕ್ಷ ಕೋಟಿ ತಲುಪುವ ನಿರೀಕ್ಷೆಯಿದೆ. ಈ ಬಾರಿ ಬಜೆಟ್‌ನಿಂದ ಜನಸಾಮಾನ್ಯರ ನಿರೀಕ್ಷೆ ಏನು?
ರಸ್ತೆ ದುರಸ್ತಿ ಮತ್ತು ನೈರ್ಮಲ್ಯ ಸುಧಾರಣೆಗಳಂತಹ ಸಣ್ಣ ಪ್ರಮಾಣದ ಅಭಿವೃದ್ಧಿ ಯೋಜನೆಗಳನ್ನು ತ್ವರಿತಗೊಳಿಸುವ ಅಗತ್ಯವಿದೆ. ಅಂಚಿನಲ್ಲಿರುವ ಸಮುದಾಯಗಳಿಗೆ ಪ್ರಯೋಜನಕಾರಿಯಾದ ಐದು ಖಾತರಿ ಯೋಜನೆಗಳನ್ನು ಮುಂದುವರಿಸಬೇಕು. ಆರ್ಥಿಕತೆ ಬಗ್ಗೆ ರಾಜಕೀಯ ಆರೋಪಗಳಿಗೆ ಉತ್ತರ ನೀಡಬೇಕಿದೆ. ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಅನುದಾನ ಮತ್ತು ಸಬ್ಸಿಡಿ ನೀಡಬೇಕು.
ಎಲ್ಲರಿಗೂ ಕೈಗೆಟುಕುವ ಗುಣಮಟ್ಟದ ಶಿಕ್ಷಣ ಸಿಗುವಂತಾಗಲು ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ಸಮಾನವಾಗಿ ಅಭಿವೃದ್ಧಿಪಡಿಸಬೇಕು. ಸುಮಾರು 6,000 ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ರಾಜ್ಯದ ಯೋಜನೆಯನ್ನು ಮರುಪರಿಶೀಲಿಸಬೇಕು ಎನ್ನುವುದು ಡಿಮ್ಯಾಂಡ್.
ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಬಡವರಿಗೆ ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡಬೇಕು. ಸರ್ಕಾರಿ ಶಾಲೆಗಳು ಕಾರ್ಪೊರೇಟ್ ಒಳಗೊಳ್ಳುವಿಕೆ ಇಲ್ಲದೇ ಮಧ್ಯಾಹ್ನದ ಊಟವನ್ನು ಒದಗಿಸಬೇಕು. ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸಲು ಬಸ್ಸುಗಳು ಮತ್ತು ಮೆಟ್ರೋ ಸೇವೆಗಳ ದರಗಳನ್ನು ಕಡಿಮೆ ಮಾಡಬೇಕು.
ನವೋದ್ಯಮಗಳು ಅಧಿಕ ಸವಾಲುಗಳನ್ನು ಎದುರಿಸುತ್ತಿವೆ. ಅವುಗಳ ಬೆಳವಣಿಗೆಗೆ ಬೆಂಬಲ ನೀಡಲು ಮೀಸಲಾದ ಬಜೆಟ್ ಮಂಡಿಸಬೇಕು. ನುರಿತ ಕಾರ್ಮಿಕರು ಮತ್ತು ಸಹಾಯಕರ ಕೊರತೆಯಿದೆ. ಅದನ್ನು ಸರಿಪಡಿಸಬೇಕು. ಇನ್ನು ಮಿಡಲ್ ಕ್ಲಾಸ್ ಮಂದಿಗೆ ಬೇಕಾದಂತೆ ಬೆಲೆ ಇಳಿಕೆ ಆಗಬೇಕು ಎನ್ನುವುದು ನಿರೀಕ್ಷೆಯಾಗಿದೆ.