Ratan Tata ಅವರ ಪ್ರೀತಿಯ ಶ್ವಾನ ‘Goa’ಗೆ ಏನಾಯ್ತು?: ಅಸಲಿ ವಿಚಾರ ಬಿಚ್ಚಿಟ್ಟ ಪೊಲೀಸರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಾಟಾ ಸಮೂಹ ಸಂಸ್ಥೆಗಳ ಮಾಜಿ ಅಧ್ಯಕ್ಷ ರತನ್​ ಟಾಟಾ (86) ಅವರು ಅಕ್ಟೋಬರ್​ 09ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಉದ್ಯಮದ ಹೊರತಾಗಿ ಅನೇಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ರತನ್​ ಟಾಟಾ ತಮ್ಮ ಪ್ರಾಣಿಪ್ರೀತಿಗೆ ಹೆಸರುವಾಸಿಯಾಗಿದ್ದರು ಎಂದರೆ ತಪ್ಪಾಗಲಾರದು.

ರತನ್​ ಟಾಟಾ ಅವರ ನಿಧನದ ದಿನ ಅವರ ಸಾಕು ನಾಯಿ ಗೋವಾ (Goa) ಮೃತದೇಹದ ಮುಂದೆ ಕಣ್ಣೀರು ಹಾಕಿತ್ತು. ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು.

ಇದಾದ ಮೂರು ದಿನಗಳ ಬಳಿಕ ರತನ್ ಟಾಟಾ ಅಗಲಿಕೆಯ ನೋವನ್ನು ಭರಿಸಲಾಗದೆ, ಗೋವಾ ಮೃತಪಟ್ಟಿದೆ ಎಂದು ವಾಟ್ಸಾಪ್, ಫೇಸ್​ಬುಕ್​ನಲ್ಲಿ ಸುದ್ದಿಗಳು ಹರಿದಾಡುತ್ತಿದ್ದವು. ಈ ಒಂದು ಸುದ್ದಿ ಸುಳ್ಳು. ಗೋವಾ ಜೀವಂತವಾಗಿಯೇ ಇದೆ ಹಾಗೂ ಆರೋಗ್ಯವಾಗಿ ಇದೆ ಎಂದು ಮುಂಬೈ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಮುಂಬೈನ ಪೊಲೀಸ್ ಇಲಾಖೆಯ ಸಿನಿಯರ್ ಇನ್ಸ್​ಪೆಕ್ಟರ್​ ಸುಧಾಕರ್ ಕುಡಲ್ಕರ್ ಈ ಬಗ್ಗೆ ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಗೋವಾ ರತನ್ ಟಾಟಾ ಅಗಲಿಕೆಯ ಮೂರು ದಿನಗಳ ನಂತರ ಮೃತಪಟ್ಟಿದೆ ಎಂದು ಸುದ್ದಿ ಹಬ್ಬಿಸಲಾಗುತ್ತಿದೆ. ಇದು ಸುಳ್ಳು ಎಂದು ತಮ್ಮ ಪೋಸ್ಟ್​ನಲ್ಲಿ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಹರಿದಾಡುತ್ತಿದ್ದಂತೆ ಸುಧಾಕರ್ ಕುಡಲ್ಕರ್ ಕೂಡಲೇ ರತನ್ ಟಾಟಾ ಅವರ ಆತ್ಮೀಯ ಶಾಂತನು ನಾಯ್ಡು ಅವರನ್ನು ಸಂಪರ್ಕಿಸಿ ಗೋವಾ ಹೇಗಿದೆ ಎಂದು ವಿಚಾರಸಿದ್ದಾರೆ. ಅವನು ಚೆನ್ನಾಗಿಯೇ ಇದ್ದಾನೆ ಎಂದು ಶಾಂತನು ಉತ್ತರಿಸಿದ್ದಾರೆ. ಹಾಗಿದ್ರೆ ಇದು ಫೇಕ್​ನ್ಯೂಸ್ ಎಂಬುದನ್ನು ಸ್ಪಷ್ಟಪಡಿಸಿಕೊಂಡ ಸುಧಾಕರ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ವಿವರವಾದ ಒಂದು ಪೋಸ್ಟ್​ನ್ನು ಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!