ಉರ್ಫಿ ಜಾವೆದ್‌ಗೆ ಏನಾಯಿತು?: ಮೈತುಂಬಾ ಬಟ್ಟೆ ಹಾಕಿದ ನಟಿಯ ಕಂಡು ನೆಟ್ಟಿಗರು ಶಾಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸದಾ ಅರೆಬರೆ ಉಡುಪು ಧರಿಸುವ ಮೂಲಕವೇ ಸುದ್ದಿಯಲ್ಲಿರುವ ಉರ್ಫಿ ಜಾವೇದ್ (Urfi Javed) ಕೊನೆಗೂ ಮೈ ತುಂಬಾ ಬಟ್ಟೆ ಹಾಕಿದ್ದಾರೆ.

ಒಂದಲ್ಲ ಒಂದು ರೀತಿಯಲ್ಲಿ ವಿಚಿತ್ರ ಬಟ್ಟೆಗಳನ್ನ ಧರಿಸೋದ್ರಲ್ಲಿ ಮುಂದಿದ್ದ ಉರ್ಫಿ ಮೊಟ್ಟ ಮೊದಲ ಬಾರಿಗೆ ಮೈತುಂಬಾ ಬಟ್ಟೆ ಧರಿಸಿ ಏಲಿಯನ್ ರೂಪದಲ್ಲಿ ಹೊರಗೆ ಬಂದಿದ್ದಾರೆ.

ಈ ಡ್ರೆಸ್​ನಲ್ಲಿ ಉರ್ಫಿ ಜಾವೇದ್ ಅವರ ಕಣ್ಣು ಹಾಗೂ ಬಾಯಿಯನ್ನು ಬಿಟ್ಟು ಬೇರೇನೂ ಕಾಣಿಸುತ್ತಿರಲಿಲ್ಲ. ಉರ್ಫಿ ಜಾವೇದ್ ಅವತಾರ ನೋಡಿದ ನೆಟ್ಟಿಗರು ನೀವು ದೆವ್ವದಂತೆಯೇ ಕಾಣುತ್ತಿದ್ದೀರಿ ಎಂದಿದ್ದಾರೆ. ಇನ್ನೂ ಕೆಲವರು ಏನಮ್ಮಾ ಇದು ಇವತ್ತೇನೂ ಕಾಣಿಸ್ತಿಲ್ವಲ್ಲಾ? ನಿನಗೆ ಬೇಸಿಗೆ ಬಿಸಿ ತಟ್ಟುತ್ತಿಲ್ವೇ ಎಂದು ಕೇಳಿದ್ದಾರೆ. ಇನ್ನೂ ಕೆಲವರು ನೀವು ಥೇಟ್ ಏಲಿಯನ್ ರೀತಿಯೇ ಕಾಣಿಸುತ್ತಿದ್ದೀರಿ ಎಂದಿದ್ದಾರೆ.

ನಟಿಯ ಈ ಲುಕ್ ಟ್ರೋಲಿಗರ ಬಾಯಿಗೆ ಆಹಾರವಾಗಿತ್ತು. ಬಿದಿರಿನ ಉಡುಪಿನ ವೀಡಿಯೋವನ್ನ ಅನೇಕರು ಶೇರ್ ಮಾಡಿದ್ದರು.

ವಿಚಿತ್ರ ಫ್ಯಾಷನ್ ಐಕಾನ್ ಅಂತಲೇ ಫೇಮಸ್ ಆಗಿರುವ ಉರ್ಫಿ ಜಾವೇದ್ ಗೆ (Urfi Javed) ಅನೇಕರು ಬೆದರಿಕೆ ಹಾಕಿದ್ದಾರೆ. ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದಾರೆ. ಉರ್ಫಿ ಕೂಡ ಸುಮ್ಮನೆ ಕುಳಿತಿಲ್ಲ. ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಮಹಿಳಾ ಆಯೋಗಕ್ಕೆ ಉರ್ಫಿ ದೂರು ನೀಡಿದ್ದರು. ತಮಗೆ ಭದ್ರತೆ ಬೇಕು ಎಂದು ಉರ್ಫಿ ಮನವಿ ಮಾಡಿಕೊಂಡಿದ್ದರು.

ತನ್ನ ವಿಚಿತ್ರ ಕಾಸ್ಟ್ಯೂಮ್ ಮೂಲಕ ಬಾಲಿವುಡ್ ಸಿನಿ ರಂಗದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಉರ್ಫಿ ಜಾವೇದ್ ಮೇಲೆ ಉರಿದುಕೊಂಡವರೇ ಹೆಚ್ಚು. ಅವಳು ಧರಿಸುವ ಅರೆಬರೆ ಬಟ್ಟೆಯ ಬಗ್ಗೆ ಸಾಕಷ್ಟು ದೂರುಗಳು ಇವೆ. ಈ ವಿಚಾರವಾಗಿ ಅವಳು ಪೊಲೀಸ್ ಸ್ಟೇಶನ್ ಮೆಟ್ಟಿಲೂ ಹತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!