Sunday, December 3, 2023

Latest Posts

ಗೂಂಡಾಗಳು ನಿಮ್ಮ ಮಕ್ಕಳನ್ನು ಹತ್ಯೆ ಮಾಡಿದ್ರೆ ಸುಮ್ನೆ ಇರ‍್ತಿದ್ರಾ? : ಸಿಎಂಗೆ ಸವಾಲ್ ಹಾಕಿದ ಈಶ್ವರಪ್ಪ

ಹೊಸದಿಗಂತ ವರದಿ ಶಿವಮೊಗ್ಗ:

ಮುಸಲ್ಮಾನ್ ಗೂಂಡಾಗಳು ಯತೀಂದ್ರ ಸಿದ್ದರಾಮಯ್ಯ ಅವರನ್ನಾ, ಡಿ.ಕೆ.ಸುರೇಶ್ ಅವರನ್ನು ಹತ್ಯೆ ಮಾಡಿದ್ದರೆ ಆ ಕುಟುಂಬಗಳಿಗೆ ನೋವು ಆಗುತ್ತಿರಲಿಲ್ಲವೇ? ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಖಾರವಾಗಿ ಪ್ರಶ್ನಿಸಿದ್ದಾರೆ.

ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಘಟನೆ ಖಂಡಿಸಿ ಹಾಗೂ ಕಾಂಗ್ರೆಸ್‌ನ ಹಿಂದೂ ವಿರೋಧಿ ನೀತಿ ವಿರೋಧಿಸಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿ‘ಟನಾ ಸ‘ೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಮುಖಂಡರು ಮುಸ್ಲಿಮರನ್ನು ಓಲೈಕೆ ಮಾಡುವುದನ್ನು ನಾವು ವಿರೋಸುವುದಿಲ್ಲ. ಆದರೆ ರಾಷ್ಟ್ರದ್ರೋಹಿ ಕೃತ್ಯ ಎಸಗಿದವರ ಪರವಾಗಿ ವಕಾಲತ್ ಮಾಡುವುದನ್ನು ಸಹಿಸಲು ಆಗುವುದಿಲ್ಲ. ಅದಕ್ಕಾಗಿಯೇ ಹಿಂದೂ ಸಮಾಜವನ್ನು ಜಾಗೃತ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಯಲ್ಲಿ ಹಸಿರು ರಕ್ತ ಹರಿಯುತ್ತಿದೆಯೋ ಅಥವಾ ಹಿಂದೂ ರಕ್ತ ಹರಿಯುತ್ತಿದೆಯೋ ಎಂಬುದನ್ನು ಮೊದಲು ಸ್ಪಷ್ಟ ಮಾಡಲಿ. ಹಸಿರು ಬೇಕೋ ಅಥವಾ ಕೇಸರಿ ಬೇಕೋ ಎಂದು ಆಯ್ಕೆ ಮಾಡಿಕೊಳ್ಳಲಿ. ಮೊದಲು ಸಿದ್ದರಾಮಯ್ಯ ದೇವಸ್ಥಾನಗಳಿಗೆ ಹೋಗುತ್ತಿರಲಿಲ್ಲ. ಹಣೆಗೆ ತಿಲಕ ಇಡುತ್ತಿರಲಿಲ್ಲ. ಈಗ ಕದ್ದು ಮುಚ್ಚಿ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ಹಣೆಗೆ ತಿಲಕ ಇಡುತ್ತಿದ್ದಾರೆ. ಹೀಗೆ ಮಾಡಿದರೆ ಹೇಡಿ ಹಿಂದೂ ಎಂದು ಕರೆಯುತ್ತಾರೆ ಎಂದು ಲೇವಡಿ ಮಾಡಿದರು.

ದೇಶದಲ್ಲಿ ಏಕರೂಪ ನಾಗರೀಕ ಸಂಹಿತೆ ಜಾರಿ ಮಾಡಲು ನರೇಂದ್ರ ಮೋದಿ ಹೊರಟಿದ್ದಾರೆ. ಅದು ಜಾರಿಯಾದರೆ ಒಬ್ಬರಿಗೆ ಒಂದೇ ಹೆಂಡತಿ, ಇಬ್ಬರೇ ಮಕ್ಕಳು ಇರಬೇಕಾಗುತ್ತದೆ. ಇದು ಗೊತ್ತಾಗಿ ಕಾಂಗ್ರೆಸ್ ಆಗಲೇ ವಿರೋಧ ಶುರು ಮಾಡಿದೆ. ಹಿಂದೂಗಳದ್ದು ಹಮ್ ದೋ-ಹಮಾರೆ ದೋ ಎಂದಾದರೆ, ಮುಸ್ಲಿಮರದ್ದು ಹಮ್ ಪಾಂಚ್-ಹಮಾರೆ ಪಚ್ಚೀಸ್ ನೀತಿ. ಇದು ಇನ್ನು ಮುಂದೆ ನಡೆಯಲ್ಲ. ದೇಶದ ಕಾನೂನಿಗೆ ಬೆಲೆ ಕೊಡುವವರು ಮಾತ್ರ ಇಲ್ಲಿ ಇರಬಹುದು. ಇಲ್ಲವಾದರೆ ದೇಶ ಬಿಡಬಹುದು ಎಂದು ಎಚ್ಚರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!