ಮಕ್ಕಳಿಗೆ ನಿತ್ಯ ನೀಡುವ ಸೆರ್ಲಾಕ್‌ನಲ್ಲಿ ಏನಿದೆ? ಭಯಬೀಳಿಸುವಂತಿದೆ ಈ ವರದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹುಟ್ಟಿದ ಆರು ತಿಂಗಳ ನಂತರ ಮಕ್ಕಳಿಗೆ ಯಾವ ಆಹಾರ ನೀಡುತ್ತೀರಿ ಎಂದು ಯಾರನ್ನಾದರೂ ಪ್ರಶ್ನೆ ಮಾಡಿ, ಅರ್ಧದಷ್ಟು ಪೋಷಕರು ಮಕ್ಕಳಿಗೆ ಸೆರ್ಲಾಕ್‌ ನೀಡುತ್ತೇವೆ ಎಂದು ಹೇಳುತ್ತಾರೆ. ಮಕ್ಕಳ ಆಹಾರ ಎಂದೇ ಫೇಮಸ್‌ ಆಗಿರುವ ಸೆರ್ಲಾಕ್‌ ತಯಾರಾಗೋದು ನೆಸ್ಲೆ ಕಂಪನಿಯಿಂದ.ಈ ಜನಪ್ರಿಯ ಸಂಸ್ಥೆ ನೆಸ್ಲೆ ಬಗ್ಗೆ ಪಬ್ಲಿಕ್‌ ಐ ತನಿಖೆ ನಡೆಸಿದ್ದು, ವರದಿ ಬೆಚ್ಚಿಬೀಳಿಸುವಂತಿದೆ.

ಭಾರತ ಸೇರಿದಂತೆ ಬಡ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೆಚ್ಚು ಮಾರಾಟವಾಗುತ್ತಿರುವ ನೆಸ್ಲೆಯ ಬೇಬಿ-ಫುಡ್​ ಬ್ರಾಂಡ್​ಗಳಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿರೋದು ದೃಢವಾಗಿದೆ. ಮಕ್ಕಳಿಗೆ ಎರಡು ವರ್ಷದವರೆಗೆ ಸಕ್ಕರೆ ನೀಡಬಾರದು ಎಂದು ವೈದ್ಯರು ಸೂಚಿಸುತ್ತಾರೆ. ಆದರೆ ನೆಸ್ಲೆ ತನ್ನ ಫೇಮಸ್‌ ಫುಡ್‌ನೊಂದಿಗೆ ಮಕ್ಕಳ ಆರೋಗ್ಯದ ಜೊತೆ ಆಟ ಆಡಿದೆ.

ಆಘಾತಕಾರಿ ವಿಚಾರ ಏನೆಂದರೆ, ಬಡ ಹಾಗೂ ಅಭಿವೃದ್ಧಿ ರಾಷ್ಟ್ರಗಳಲ್ಲಿ ನೆಸ್ಲೆ ಮಾರಾಟ ಮಾಡುತ್ತಿರುವ ಶಿಶುಗಳ ಫುಡ್​​ನಲ್ಲಿ ಮಾತ್ರ ಸಕ್ಕರೆ ಅಂಶ ಪತ್ತೆಯಾಗಿದೆ. ಆದರೆ ಬ್ರಿಟನ್, ಜರ್ಮನಿ, ಸ್ವಿಟ್ಜರ್ಲೆಂಡ್, ಅಮೆರಿಕ ಸೇರಿಂದಂತೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಮಾರಾಟವಾಗ್ತಿರುವ ಬ್ರ್ಯಾಂಡ್​ಗಳಲ್ಲಿ ಸಕ್ಕರೆ ಇಲ್ಲದೇ ತನ್ನ ಪ್ರಾಡೆಕ್ಟ್​ಗಳನ್ನು ಮಾರಾಟ ಮಾಡುತ್ತಿದೆರೋದು ಬೆಳಕಿಗೆ ಬಂದಿದೆ. ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಮಾರಾಟ ಆಗುತ್ತಿರುವ ಉತ್ಪನ್ನಗಳಲ್ಲಿ ಹೇರಳವಾಗಿ ಸಕ್ಕರೆ ಬಳಸುತ್ತಿದೆ ಎಂದು ತನಿಖಾ ವರದಿ ತಿಳಿಸಿದೆ.

ಈ ಮೂಲಕ ವಿಶ್ವದ ಅತಿದೊಡ್ಡ ಗ್ರಾಹಕ ಉತ್ಪನ್ನಗಳ ಕಂಪನಿ, ತನ್ನ ಆಹಾರ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟದಲ್ಲಿ ನಿಯಮ ಉಲ್ಲಂಘಿಸಿದ ಆರೋಪ ಹೊತ್ತಿದೆ. ಶಿಶುಗಳಿಗಾಗಿ ಒದಗಿಸುವ ಸೆರೆಲಾಕ್​​ನಂತಹ ಉತ್ಪನ್ನಗಳಲ್ಲಿ ಸಕ್ಕರೆ ಮತ್ತು ಜೇನುತುಪ್ಪ ಸೇರಿಸಿರುವುದು ಕಂಡುಬಂದಿದೆ. ಭಾರತದಲ್ಲಿ ಮಾರಾಟವಾಗುವ ನೆಸ್ಲೆಯ ಮಕ್ಕಳ ಉತ್ಪನ್ನಗಳ ಪ್ರತಿ ಸೇವೆಯಲ್ಲಿ ಸುಮಾರು 3 ಗ್ರಾಂ ಸಕ್ಕರೆ ಅಂಶ ಇದೆ. ಹೀಗಿದ್ದೂ ಪ್ಯಾಕೆಟ್‌ನಲ್ಲಿ ಸಕ್ಕರೆ ಪ್ರಮಾಣದ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಿಲ್ಲ ಎಂದು ವರದಿ ಹೇಳಿದೆ. ಮಕ್ಕಳಿಗೆ ಒಂದು ವರ್ಷದ ವರೆಗೆ ಜೇನುತುಪ್ಪವನ್ನು ಕೂಡ ನೀಡುವಂತಿಲ್ಲ. ತನ್ನ ಇಂಗ್ರೀಡಿಯಂಟ್ಸ್‌ನಲ್ಲಿ ನೆಸ್ಲೆ ಇದನ್ನೆಲ್ಲ ಅಪ್‌ಲೋಡ್‌ ಮಾಡಿಲ್ಲ.

ತನಿಖಾ ಸಂಸ್ಥೆಗಳಾದ ಪಬ್ಲಿಕ್ ಐ ಮತ್ತು IBFAN (ಇಂಟರ್‌ನ್ಯಾಷನಲ್ ಬೇಬಿ ಫುಡ್ ಆಕ್ಷನ್ ನೆಟ್‌ವರ್ಕ್) ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ ಮಾರಾಟವಾದ ಕಂಪನಿಯ ಉತ್ಪನ್ನಗಳ ಮಾದರಿಗಳನ್ನು ವೈಜ್ಞಾನಿಕ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಬೆಲ್ಜಿಯಂನಲ್ಲಿ ನಡೆದ ಪ್ರಯೋಗಾಲಯದಲ್ಲಿ ಈ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಜರ್ಮನಿ, ಫ್ರಾನ್ಸ್ ಮತ್ತು ಬ್ರಿಟನ್‌ನಲ್ಲಿ ನೆಸ್ಲೆ ಮಾರಾಟ ಮಾಡುವ ಸೆರೆಲಾಕ್​ನಲ್ಲಿ ಸಕ್ಕರೆ ಅಂಶ ಕಂಡುಬಂದಿಲ್ಲ. ಆದರೆ ಇಥಿಯೋಪಿಯಾ ( Ethiopia) ಮತ್ತು ತೈಲ್ಯಾಂಡ್​ನಲ್ಲಿ ಮಾರಾಟವಾಗುವ ಸೆರೆಲಾಕ್​ನ ಒಂದು ಪ್ಯಾಕೇಟ್​ನಲ್ಲಿ ಕ್ರಮವಾಗಿ 5 ಮತ್ತು 6 ಗ್ರಾಂ ಸಕ್ಕರೆ ಪ್ರಮಾಣ ಇದೆ ಎಂದು ವರದಿ ಹೇಳಿದೆ.

ಪೋಷಕರೇ ಎಚ್ಚರ ನಿಮ್ಮ ಮಕ್ಕಳ ಆರೋಗ್ಯ ನಿಮ್ಮ ಕೈಲಿದೆ. ಮಕ್ಕಳಿಗೆ ತಿನ್ನಲು ನೀಡುವ ಪ್ರತೀ ವಸ್ತುವಿನ ಹಿಂಬದಿಯಲ್ಲಿ ಯಾವೆಲ್ಲಾ ಪದಾರ್ಥಗಳನ್ನು ಬಳಸಿದ್ದಾರೆ ಎಂದು ಪರೀಕ್ಷಿಸಿಯೇ ಉತ್ಪನ್ನಗಳನ್ನು ಖರೀದಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!