ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಯೋಸೈಟಿಸ್ ಇದೀಗ ಇದರ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಈ ಕಾಯಿಲೆಗೆ ತುತ್ತಾಗಿದ್ದಾರೆ. ಈ ಸುದ್ದಿ ಅವರ ಅಭಿಮಾನಿಗಳು ಹಾಗೂ ಸಿನಿರಂಗಕ್ಕೆ ಆಘಾತವನ್ನುಂಟುಮಾಡಿದೆ. ಸಮಂತಾ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಎಲ್ಲರ ಕಣ್ಣು ಮಯೋಸೈಟಿಸ್ ಕಾಯಿಲೆ ಮೇಲೆ ಬಿದ್ದಿದೆ. ಹೀಂಗದರೆ ನಿಖರವಾಗಿ ಏನು? ರೋಗದ ಲಕ್ಷಣಗಳೇನು? ಯಾರಿಗೆ ಸೋಂಕು ತಗಲುತ್ತದೆ? ಅದು ಏಕೆ ಬರುತ್ತದೆ? ಎಂದು ಎಲ್ಲರೂ ಅದರ ಬಗ್ಗೆ ಕೇಳುತ್ತಿದ್ದಾರೆ.
ಮಯೋಸೈಟಿಸ್ ಅಪರೂಪದ ಕಾಯಿಲೆಯಾಗಿದ್ದು, ಅನೇಕ ಸಂದರ್ಭಗಳಲ್ಲಿ ಪ್ರಾಣಾಂತಕ ರೋಗ. ಈ ರೋಗವು ಒಂದು ಲಕ್ಷದಲ್ಲಿ 4 ರಿಂದ 20 ಜನರನ್ನು ಬಾಧಿಸುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ ಹಳುವುದಾದರೆ ಆಟೋ ಇಮ್ಯೂನಿಟಿ ಡಿಸಾರ್ಡರ್ ನೋವು ಮತ್ತು ಆಯಾಸದಿಂದ ರೋಗಿಯನ್ನು ನರಳಿಸುತ್ತದೆ.
ನೀರಿನ ಬಾಟಲಿಯಿಂದ ಆರಂಭಿಸಿ ಬಕೆಟ್ ನೀರನ್ನು ಎತ್ತಲು ಹರಸಾಹಸ ಪಡಬೇಕು. ಕುರ್ಚಿಯನ್ನು ಅತ್ತಿಂದಿತ್ತ ಕದಲಿಸಲು ಸಹ ತೊಂದರೆ ಅನುಭವಿಸಬೇಕು. ಸಾಮಾನ್ಯವಾಗಿ ಇದು ವೃದ್ಧಾಪ್ಯದಲ್ಲಿ ಕಂಡುಬರುವುದು ಸಾಮಾನ್ಯ ಆದರೆ ಮಧ್ಯವಯಸ್ಸಿನಲ್ಲಿ ಪ್ರತಿದಿನ ಇಂತಹ ದೌರ್ಬಲ್ಯ ಕಂಡು ಬಂದರೆ ಅದನ್ನು ‘ಮಯೋಸೈಟಿಸ್’ ಲಕ್ಷಣ ಎಂದು ಪರಿಗಣಿಸಬೇಕು ಎನ್ನುತ್ತಾರೆ ವೈದ್ಯರು.
ಮಯೋಸೈಟಿಸ್ ಸ್ನಾಯುಗಳ ಉರಿಯೂತವನ್ನು ಉಂಟುಮಾಡುತ್ತದೆ. ಗಾಯ, ಸೋಂಕು ಅಥವಾ ದುರ್ಬಲಗೊಂಡ ರೋಗನಿರೋಧಕ ಶಕ್ತಿ ಇದ್ದಾಗ ಈ ರೋಗ ಸಂಭವಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ಸ್ವಲ್ಪ ದೂರ ನಡೆದರೂ ನಿಂತಲ್ಲೇ ಸುಸ್ತಾಗುವುದು, ಉಸಿರಾಟದ ತೊಂದರೆ, ಆಹಾರವನ್ನು ನುಂಗಲು ಸಹ ಕಷ್ಟವನ್ನುಂಟುಮಾಡುತ್ತದೆ. ಫಿಸಿಯೋಥೆರಪಿ, ಹಿಟ್ ಥೆರಪಿ ಮತ್ತು ವ್ಯಾಯಾಮದಿಂದ ಈ ರೋಗವನ್ನು ಗುಣಪಡಿಸಬಹುದು. ಈ ರೋಗವು ಕೆಲವೊಮ್ಮೆ ಅಂಗವೈಕಲ್ಯಕ್ಕೆ ಕಾರಣವಾಗಬಹುದು ಮತ್ತು ಪರಿಸ್ಥಿತಿ ತುಂಬಾ ದೂರ ಹೋದರೆ ಸಾವಿಗೆ ಕಾರಣವಾಗಬಹುದು.
ಈ ರೋಗದ ಚಿಕಿತ್ಸೆಯು ಮೊದಲು ಸ್ಟೀರಾಯ್ಡ್ಗಳೊಂದಿಗೆ ಪ್ರಾರಂಭವಾಗುತ್ತದೆ. ಸ್ನಾಯು ನೋವನ್ನು ನಿವಾರಿಸಲು ಮೊದಲು ಸ್ಟೀರಾಯ್ಡ್‌ಗಳ ಮೂಲಕ ಮಾತ್ರೆಗಳು ಅಥವಾ ಚುಚ್ಚುಮದ್ದಿನ ರೂಪದಲ್ಲಿ ದೇಹಕ್ಕೆ ಚುಚ್ಚಲಾಗುತ್ತದೆ. ಚಿಕಿತ್ಸೆಯ ಸಮಯದಲ್ಲಿ ಯಾವುದೇ ಒತ್ತಡವಿಲ್ಲದೆ ಶಾಂತವಾಗಿ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡುತ್ತಾರೆ. ಈ ರೋಗವನ್ನು ಕಡಿಮೆ ಮಾಡುವಲ್ಲಿ ದಿನನಿತ್ಯದ ವ್ಯಾಯಾಮ ಮತ್ತು ಫಿಸಿಯೋಥೆರಪಿ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ.