ʼಸಿಂಧೂರʼ ಅಂದ್ರೇನು? ತಲೆ ಕೆಡಿಸಿಕೊಂಡು ಅರ್ಥ ಹುಡುಕಾಡ್ತಿದೆ ಪಾಕ್‌

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ʻಆಪರೇಷನ್‌ ಸಿಂಧೂರʼ ಹೆಸರಲ್ಲಿ ಪಾಕ್‌ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಸೇನೆ ನಡೆಸಿದ ಸಸ್ಪೆನ್ಸ್‌ ದಾಳಿ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಾತ್ರೋ ರಾತ್ರಿ ನಡೆಸಿದ 23 ನಿಮಿಷಗಳ ದಾಳಿಯಲ್ಲಿ ಸುಮಾರು 100 ಉಗ್ರರು ಹತರಾಗಿದ್ದಾರೆ.

ಈ ದಾಳಿಯು ಪಾಕ್‌ ಜನತೆಯಲ್ಲೂ ನಡುಕ ಹುಟ್ಟಿಸಿದ್ದು, ಗೂಗಲ್‌ನಲ್ಲಿ ವಾಯುದಾಳಿ, ಭಾರತೀಯ ಸೇನೆ, ಭಾರತ ಮತ್ತು ಆಪರೇಷನ್ ಸಿಂಧೂರದ ಬಗ್ಗೆ ತೀವ್ರ ಹುಡುಕಾಟ ನಡೆಸಿದ್ದಾರೆ. ʻಸಿಂಧೂರʼ ಹೆಸರಿನ ಅರ್ಥವನ್ನು ತೆಲೆ ಕೆಡಿಸಿಕೊಂಡು ಹುಡುಕಾಡುತ್ತಿದ್ದಾರೆ ಎಂಬುದು ಗೂಗಲ್ ಟ್ರೆಂಡ್‌‌ ನಲ್ಲಿ ಗೊತ್ತಾಗಿದೆ.

ಭಾರತೀಯ ಸೇನೆ ಪ್ರತೀಕಾರದ ದಾಳಿ ಬಳಿಕ ಪಾಕಿಸ್ತಾನಿಯರು ʻಸಿಂಧೂರʼದ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಅದಕ್ಕಾಗಿ ಗೂಗಲ್‌ನಲ್ಲಿ ʻಆಪರೇಷನ್ ಸಿಂಧೂರ್ʼ ಬಗ್ಗೆ ಹುಡುಕಾಡುತ್ತಿದ್ದಾರೆ. ಆಪರೇಷನ್ ಸಿಂಧೂರ್, ಇಂಡಿಯಾ ಆಪರೇಷನ್ ಸಿಂಧೂರ್, ಸಿಂಧೂರ್ ಅಟ್ಯಾಕ್, ವಾಟ್ ಈಸ್ ಆಪರೇಷನ್ ಸಿಂಧೂರ್ (India Attack Bahawalpur, India Attack on Pakistan Today, India Attack on Bahawalpur, India Attacked on Pakistan, India Strikes Pakistan) ಮುಂತಾದ ಪದಗಳನ್ನು ಸರ್ಚಿಂಗ್‌ ಮಾಡುತ್ತಿದ್ದಾರೆ. ಇದರೊಂದಿಗೆ ಪಾಕಿಸ್ತಾನ ಸೇನೆಯ ಮುಂದಿನ ಕಾರ್ಯಾಚರಣೆಯ ಬಗ್ಗೆಯೂ ಹುಡುಕಾಡುತ್ತಿರುವುದು ಗೂಗಲ್‌ ಟ್ರೆಂಡ್ಸ್‌ನಲ್ಲಿ ಕಂಡುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!