ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಕಳೆದ ರಾತ್ರಿ ನಡೆದ ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಹೇಗಿತ್ತು?
ಇಲ್ಲಿದೆ ಕ್ಷಣ ಕ್ಷಣದ ಬೆಳವಣಿಗೆಗಳ ಮಾಹಿತಿ:
ಮಧ್ಯರಾತ್ರಿ ಬಳಿಕ ಮುಜಫರಾಬಾದ್ ನಗರದ ಸುತ್ತಮುತ್ತಲಿನ ಪರ್ವತಗಳ ಬಳಿ ಸ್ಫೋಟಗಳ ಸದ್ದು
ಸ್ಫೋಟದ ಬೆನ್ನಿಗೇ ನಗರದಲ್ಲಿ ವಿದ್ಯುತ್ ಸರಬರಾಜು ಸ್ಥಗಿತ
ತಡರಾತ್ರಿ 1 ಗಂಟೆಗೆ ಪಾಕ್ ವಿರುದ್ಧ ಭಾರತೀಯ ಸೇನೆ ದಾಳಿ ನಡೆಸಿದೆ ಎಂಬ ಮೊದಲ ಮಾಹಿತಿ ಬಹಿರಂಗ
ಹೇಳಿಕೆ ಬಿಡುಗಡೆ ಮಾಡಿದ ಪಾಕಿಸ್ತಾನ ಸೇನೆ, ಭಾರತದ ದಾಳಿಗೆ ತಕ್ಕ ಪ್ರತಿಕ್ರಿಯೆ ಘೋಷಣೆ
ಇದರ ಬೆನ್ನಲ್ಲೇ ಪಾಕಿಸ್ತಾನ, ಪಿಒಕೆಯಲ್ಲಿ ಭಾರತದ ದಾಳಿ ಬಗ್ಗೆ ಅಧಿಕೃತ ಮಾಹಿತಿ, ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ್ ನಾಮಕರಣ. ಒಟ್ಟು9 ಗುರಿಗಳ ಮೇಲೆ ಸೇನೆಯ ದಾಳಿ
1:45 am ಪಾಕಿಸ್ತಾನದ ಡಾನ್ ನ್ಯೂಸ್ನಿಂದ ಕೋಟ್ಲಿ, ಬಹವಾಲ್ಪುರ್ ಮತ್ತು ಮುಜಫರಾಬಾದ್ನಲ್ಲಿ ಭಾರತ ಕ್ಷಿಪಣಿ ದಾಳಿ ನಡೆಸಿದೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಹೇಳಿದ್ದಾರೆ ಎಂಬ ವರದಿ ಬಿತ್ತರ.
4:32 am ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ಪಾಕಿಸ್ತಾನದ ಎನ್ಎಸ್ಎ ಮತ್ತು ಐಎಸ್ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅಸಿಮ್ ಮಲಿಕ್ ಅವರೊಂದಿಗೆ ಭಾರತದ ದಾಳಿಯ ಕುರಿತು ಚರ್ಚೆ
4:35 am ಭಾರತದ ದಾಳಿಯ ಬೆನ್ನಿಗೇ ಪಾಕಿಸ್ತಾನಕ್ಕೆ ಹೋಗುವ ವಿಮಾನ ರದ್ದು.
5:04 am ದಾಳಿಗೊಳಗಾದ ಒಂಬತ್ತು ಸ್ಥಳಗಳಲ್ಲಿ ನಾಲ್ಕು ಪಾಕಿಸ್ತಾನ, ಐದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿವೆ ಎಂಬ ಮಾಹಿತಿ
5:27 am ಭಾರತ ಮತ್ತು ಪಾಕಿಸ್ತಾನ ನಡುವಿನ ಪರಿಸ್ಥಿತಿಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕ್ ರುಬಿಯೊ ಹೇಳಿಕೆ.
5:45 am ಪಾಕಿಸ್ತಾನಕ್ಕೆ ಹೋಗುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದ ಕತಾರ್ ಏರ್ವೇಸ್.
6:00 am ಪೂಂಚ್-ರಾಜೌರಿ ವಲಯದ ಭಿಂಬರ್ ಗಾಲಿ ಪ್ರದೇಶದಲ್ಲಿ ಪಾಕಿಸ್ತಾನ ಮತ್ತೊಮ್ಮೆ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ ಫಿರಂಗಿಗಳಿಂದ ಗುಂಡು ಹಾರಾಟ
6:08 am ಆಪರೇಷನ್ ಸಿಂಧೂರ್ನಲ್ಲಿ ಭಾಗಿಯಾಗಿದ್ದ ಎಲ್ಲಾ ಭಾರತೀಯ ಪೈಲಟ್, ಯುದ್ಧ ವಿಮಾನಗಳು ಸುರಕ್ಷಿತವಾಗಿ ವಾಪಸ್ ಮರಳಿ ತಮ್ಮ ನೆಲೆಗೆ
6:14 am ಪಾಕಿಸ್ತಾನ ವ್ಯಾಪ್ತಿಯ ವಾಯುಪ್ರದೇಶ ಬಂದ್