ಮಗನಿಗೆ ಏನೆಂದು ಹೆಸರಿಟ್ರು ಸೋನಮ್ ಕಪೂರ್?

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಸೋನಮ್ ಕಪೂರ್ ಹಾಗೂ ಆನಂದ್ ಅಹೂಜ ತಮ್ಮ ಮಗನಿಗೆ ‘ವಾಯು ಕಪೂರ್ ಅಹೂಜ’ ಎಂದು ಹೆಸರಿಟ್ಟಿದ್ದಾರೆ.

ಹೆಸರಿನ ಅರ್ಥವನ್ನು ಸೋನಮ್ ವಿವರಿಸಿದ್ದು, ವಾಯು ಎಂದರೆ ಗಾಳಿ, ಪಂಚಭೂತಗಳಲ್ಲಿ ಒಂದು, ಉಸಿರಾಟದ ದೇವತೆ ಹಾಗೂ ಹನುಮಂತನ ತಂದೆ ಹೆಸರು ವಾಯು ಎಂದಿದ್ದಾರೆ. ನಮ್ಮಿಬ್ಬರ ಜೀವನದಲ್ಲಿ ಹೊಸ ಉಸಿರನ್ನು ನೀಡಿದ್ದಾನೆ, ನಮ್ಮ ವಾಯುಗೆ ನೀವು ಆಶೀರ್ವಾದ ನೀಡಿ ಎಂದಿದ್ದಾರೆ.

ಅಭಿಮಾನಿಗಳಿಗೂ ಹೆಸರು ಇಷ್ಟವಾಗಿದ್ದು, ಮಗುವಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!