ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ದೇಶವೇ ಸಂಭ್ರಮದ ಆಯುಧಪೂಜೆ ನೆರವೇರಿಸುತ್ತಿದೆ. ಆಯುಧ ಪೂಜೆಯನ್ನು ಅಸ್ತ್ರಪೂಜೆ ಎಂದೂ ಕರೆಯಲಾಗುತ್ತದೆ. ತಾವು ಬಳಸುವ ಉಪಕರಣಗಳನ್ನು, ಆಯುಧಗಳನ್ನು ಹಾಗೂ ವಾಹನಗಳನ್ನು ಇಂದು ಶುಚಿಗೊಳಿಸಿ ಪೂಜಿಸಲಾಗುವುದು.
ಆಯುಧ ಪೂಜೆ ಹಿನ್ನೆಲೆ ಏನು? ಪೂಜೆ ಏಕೆ ಮಾಡಬೇಕು?
ಮಹಿಷಾಸುರನೆಂಬ ರಾಕ್ಷಸ ಬಹಳ ಕ್ರೂರಿಯಾಗಿದ್ದ. ಈತ ತಪಸ್ಸು ಮಾಡಿ ತನ್ನ ಸಾವಿನ ಬಗೆಗೆ ವರವೊಂದನ್ನು ಪಡೆದಿದ್ದ. ಅದೇನೆಂದರೆ ಆತನ ಸಾವು ಒಂದು ಹೆಣ್ಣಿನ ಕೈಯಿಂದಲೇ ಆಗಬೇಕಿತ್ತು. ಹೆಣ್ಣುಮಕ್ಕಳಿಗೆ ನನ್ನಂತ ದೈತ್ಯ ರಾಕ್ಷಸನನ್ನು ಕೊಲ್ಲುವುದು ಅಸಾಧ್ಯ ಎನ್ನುವುದು ಅವನ ನಂಬಿಕೆಯಾಗಿತ್ತು.
ಭೂಮಿ ಮೇಲಿನ ಜನರನ್ನು ಹಿಂಸಿಸಿ ಕೊಂದ ನಂತರ ಈತ ದೇವಲೋಕಕ್ಕೆ ಕಾಲಿಟ್ಟ. ದೇವತೆಗಳನ್ನು ಸ್ವರ್ಗ ಬಿಟ್ಟು ಹೋಗುವಂತೆ ಒತ್ತಾಯಿಸಿದೆ. ಎಲ್ಲ ದೇವರುಗಳು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರನ ಬಳಿ ಬಂದರು. ರಾಕ್ಷಸನನ್ನು ವಧೆ ಮಾಡುವಂತೆ ಕೇಳಿಕೊಂಡರು. ಆದರೆ ಆತ ವರ ಪಡೆದಿರುವ ಪ್ರಕಾರ ಆತನ ಸಾವು ಹೆಣ್ಣಿನಿಂದ ಮಾತ್ರ ಸಾಧ್ಯ. ಆದರೆ ಸಾಮಾನ್ಯ ಸ್ತ್ರೀಯಿಂದ ಆತನ ಹತ್ಯೆ ಅಸಾಧ್ಯ.
ಆಗ ದೇವತೆಗಳು ತಮ್ಮ ವಿಶಿಷ್ಟ ಶಕ್ತಿ ಹಾಗೂ ಆಯುಧಗಳನ್ನು ನೀಡಿ, ಶಕ್ತಿ ಹೊಂದಿರುವ ಮಹಿಳೆಯನ್ನು ಸೃಷ್ಟಿಸಿದರು. ಆಕೆಯೇ ದುರ್ಗಾ ದೇವಿ. ಎಲ್ಲಾ ದೇವತೆಗಳು ತಮ್ಮ ಆಯುಧಗಳನ್ನು ಆಕೆಗೆ ನೀಡಿದರು. ಇದರಿಂದ ಆಕೆ ಶಕ್ತಿವಂತಳಾಗಿ ಮಹಿಷಾಸುರನ ವಧೆಗೆ ತಯಾರಾದಳು. ಎಂಟು ದಿನಗಳು ದೇವಿ ಹಾಗೂ ರಾಕ್ಷಸನ ಮಧ್ಯೆ ಯುದ್ಧ ನಡೆದಿದೆ. ಒಂಬತ್ತನೇ ದಿನ ಆಕೆ ಮಹಿಷಾಸುರನನ್ನು ಕೊಂದು ಮಹಿಷಾಸುರ ಮರ್ದಿನಿಯಾಗುತ್ತಾಳೆ. ಎಂಟು ದಿನ ದೇವಿಯ ಅವತಾರವನ್ನು ಪೂಜಿಸಲಾಗುವುದು. ಮಹಿಷಾಸುರನನ್ನು ವಧಿಸಲು ದೇವಿ ಸಾಕಷ್ಟು ಆಯುಧಗಳನ್ನು ಬಳಸಿದ್ದು, ಇಂದು ಅದನ್ನು ಪೂಜಿಸಲಾಗುವುದು.
ಪೂಜೆ ಹೇಗೆ?
ಇಂದು ಎಲ್ಲಾ ರೀತಿಯ ಉಪಕರಣಗಳನ್ನು ಹಾಗೂ ಆಯುಧಗಳನ್ನು ಸ್ವಚ್ಛಗೊಳಿಸಲಾಗುವುದು
ನಂತರ ಶ್ರೀಗಂಧ ಹಾಗೂ ಕುಂಕುಮ ಹಚ್ಚಿ ಹೂವು ಮುಡಿಸಲಾಗುವುದು
ನಂತರ ವಾಹನಗಳ ಮುಂದೆ ಕುಂಬಳಕಾಯಿಯನ್ನು ಒಡೆಯಲಾಗುವುದು