ಏರ್‌ ಶೋಗೂ ಮಾಂಸ ಮಾರಾಟ ನಿಷೇಧಕ್ಕೂ ಸಂಬಂಧ ಏನು? ಮಾರಾಟಗಾರರ ವಿರೋಧ ಏಕೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಏರೋ ಇಂಡಿಯಾ ವತಿಯಿಂದ ಯಲಹಂಕದಲ್ಲಿ ನಡೆಯುವ 2025ನೇ ಸಾಲಿನ ಏರ್ ಶೋಗೆ  ಸಿದ್ಧತೆ ಭರದಿಂದ ಸಾಗಿದೆ.

ಎರಡು ವರ್ಷಗಳಿಗೊಮ್ಮೆ ನಡೆಯುವ ಏರ್ ಶೋಗೆ ಕೌಂಟ್ ದಿನಗಣನೆ ಆರಂಭವಾಗಿದೆ. ಫೆಬ್ರವರಿ 10 ರಿಂದ 14ರವರೆಗೆ ನಡೆಯುವ ಅಂತರರಾಷ್ಟ್ರೀಯ ಏರ್ ಶೋ ನೋಡಲು ಬೆಂಗಳೂರು ಜನ ಕಾತುರರಾಗಿದ್ದಾರೆ. ಏರ್ ಶೋಗೆ ಸಕಲ ತಯಾರಿ ನಡೆಯುತ್ತಿದೆ.

ಅಂತರರಾಷ್ಟ್ರೀಯ ಏರ್‌ ಶೋ ನಡೆಯುವ ಯಲಹಂಕ ವಾಯುನೆಲೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾಂಸ ಮಾರಾಟವನ್ನ ನಿಷೇಧ ಮಾಡಲಾಗುತ್ತೆ. ಅದರಂತೆ, ಈ ಬಾರಿ ಕೂಡ ಬೃಹತ್​ ಬೆಂಗಳೂರು ಮಹಾನಗರ ಪಾಲೀಕೆ ಯಲಹಂಕ ವಲಯದ ಏರ್‌ಪೋರ್ಸ್‌ ಸ್ಟೇಷನ್‌ನಿಂದ 13 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಾಂಸ ಮಾರಾಟದ ಉದ್ಯಮಗಳನ್ನು 26 ದಿನ ಮುಚ್ಚುವಂತೆ ಆದೇಶ ಹೊರಡಿಸಿದೆ.

ಪಾಲಿಕೆ ನಿಮಯ ಉಲ್ಲಂಘನೆ ಮಾಡಿದರೇ ಬಿಬಿಎಂಪಿ ಕಾಯ್ದೆ 2020 ಮತ್ತು ಏರ್ ಕ್ರಾಫ್ಟ್ ರೂಲ್ಸ್ 1937 ಪ್ರಕಾರ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತೆ ಎಚ್ಚರಿಕೆ ನೀಡಿತ್ತು. ಎಚ್ಚರಿಕೆ ನಂತರವೂ ವ್ಯಾಪಾರಿಗಳು ಮಾಂಸ ಮಾರಾಟ ಮಾಡುತ್ತಿದ್ದಾರೆ.

ಯಲಹಂಕದ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾಂಸ ಮಾರಾಟ ಮಾಡುವುದರಿಂದ ಪಕ್ಷಿಗಳ ಹಾರಾಟ ಹೆಚ್ಚಾಗುತ್ತೆ. ಇದರಿಂದ ಏರ್ ಶೋ ಸಂದರ್ಭದಲ್ಲಿ ಯುದ್ಧ ವಿಮಾನಗಳ ಹಾರಾಟಕ್ಕೆ ಸಮಸ್ಯೆಯಾಗುತ್ತೆ ಎಂದು ಪಾಲಿಕೆ ಈ ಆದೇಶ ಹೊರಡಿಸಿದೆ.

ಪಾಲಿಕೆಯ ಆದೇಶಕ್ಕೆ ಮಾಂಸ ಮಾರಾಟ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಮಾಂಸದ ಅಂಗಡಿಗಳು, ಮಾಂಸಾಹಾರ ಹೊಟೇಲ್​ಗಳು ಎಂದಿನಂತೆ ಕಾರ್ಯನಿರ್ವಹಿಸ್ತಿವೆ. ಇತ್ತ ಬಾಗಲೂರು ಮುಖ್ಯರಸ್ತೆಯಲ್ಲೂ ಮಟನ್, ಚಿಕನ್ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ, ಪಾಲಿಕೆಯ ಆದೇಶ ಬರೀ ಪತ್ರಕ್ಕೆ ಮಾತ್ರ ಸೀಮಿತವಾಯ್ತ ಎಂಬ ಪ್ರಶ್ನೆ ಉದ್ಭವಿಸಿದೆ.

- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!