ಮಕ್ಕಳು ಕಲಿಯಬೇಕಾದ ಹಣದ ಪಾಠ ಯಾವುದು?: ಪುಟ್ಟ ಬಾಲಕನಿಂದ ವಿತ್ತ ಸಚಿವೆಗೊಂದು ಪ್ರಶ್ನೆ!

ಹೊಸದಿಗಂತ ಮಂಗಳೂರು:

ಸಿಟಿಜನ್ ಕೌನ್ಸಿಲ್ ಮಂಗಳೂರು ಘಟಕದ ವತಿಯಿಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಬುಧವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬಂತು. ನಗರದ ಹಲವಾರು ಮಂದಿ ನಾಗರಿಕರು ಪ್ರಬುದ್ಧ ಪ್ರಶ್ನೆಗಳೊಂದಿಗೆ ವಿತ್ತ ಸಚಿವರ ಗಮನಸೆಳೆದರು.

ಕರಾವಳಿಯ ಬಗ್ಗೆ ಅಪಾರ ಪ್ರೀತ್ಯಾಭಿಮಾನದ ಮಾತುಗಳೊಂದಿಗೆ ಮಾತು ಆರಂಭಿಸಿದ ಹಣಕಾಸು ಸಚಿವರು, ಎಲ್ಲರ ಪ್ರಶ್ನೆಗಳಿಗೂ ಸಾವಧಾನದಿಂದಲೇ ಉತ್ತರಿಸಿದರು. ಈ ನಡುವೆ ಪುಟ್ಟ ಬಾಲಕನಿಂದ ತೂರಿ ಬಂದ ಪ್ರಶ್ನೆಯೊಂದು ಕೇಂದ್ರ ಸಚಿವೆಯ ಗಮನ ಸೆಳೆಯಿತು. ‘ಮಕ್ಕಳು ಕಲಿಯಬೇಕಾದ ಹಣದ ಪಾಠ ಯಾವುದು’ ? ಎಂಬ ಮಂಗಳೂರಿನ ಸಂತ ಅಲೋಶಿಯಸ್ ಗೊನ್ಜಾಗ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿ ರಿಷ್ಯಂತ್ ಅವರ ಪ್ರಶ್ನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು ಆತನ್ನು ವೇದಿಕೆಗೆ ಕರೆದು ಅಭಿನಂದಿಸಿದರು. ಮಕ್ಕಳಲ್ಲಿ ಹಣಕಾಸಿನ ಅರಿವು ಇರಲೇ ಬೇಕು. ಎಳವೆಯಲ್ಲಿ ಇಂತಹ ಹಣಕಾಸಿನ ಶಿಕ್ಷಣ ಬಂದರೆ ಅವರಿಗೆ ಉಳಿತಾಯ ವಿಚಾರದ ಅರಿವಾಗುತ್ತದೆ ಎಂದು ಸಚಿವರು ನುಡಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!