ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷದ ಸಂಭ್ರಮದ ನಡುವೆ ಹಲವು ಭವಿಷ್ಯಕಾರರು 2025ರ ಸಾಲಿನ ಭವಿಷ್ಯ ನುಡಿದಿದ್ದಾರೆ. ನಾಸ್ಟ್ರಡಾಮಸ್, ಬಾಬಾ ವಂಗಾ ನುಡಿದಿರುವ ಭವಿಷ್ಯಗಳು ಬಹಿರಂಗವಾಗಿದೆ. ಇದರ ನಡುವೆ 38ರ ಹರೆಯದ ಲಂಡನ್ ಮೂಲದ ಭವಿಷ್ಯಕಾರ ನಿಕೋಲಸ್ ಅಹೌಜುಲಾ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಇದುವರೆಗೆ ನಿಕೋಸಲ್ ಹೇಳಿದ ಎಲ್ಲಾ ಭವಿಷ್ಯಗಳು ನಿಜವಾಗಿದೆ. ಕೋವಿಡ್ ವೈರಸ್ ಬಹುತೇಕರ ಬದುಕು ನಾಶ ಮಾಡಲಿದೆ ಅನ್ನೋ ನಿಖರ ಭವಿಷ್ಯವನ್ನು 2018ರಲ್ಲೇ ಈತ ನುಡಿದಿದ್ದ. ಇದೀಗ 2025ರ ವರ್ಷ ಭಯಾನಕ ಎಂದಿದ್ದಾನೆ. ಎಲ್ಲೆಡೆ ಸಂಘರ್ಷಗಳು ಶುರುವಾಗಲಿದ್ದು, 3ನೇ ಮಹಾಯುದ್ಧಕ್ಕೆ ಕಾರಣವಾಗಲಿದೆ ಎಂದಿದ್ದಾನೆ.
2025ರಲ್ಲಿ ಅತೀ ಹೆಚ್ಚು ಸಂಘರ್ಷಗಳು ಧಾರ್ಮಿಕ ಕಾರಣದಿಂದ ಆಗಲಿದೆ . ಧಾರ್ಮಿಕ ಹಾಗೂ ರಾಷ್ಟ್ರೀಯತೆ ಕಾರಣದಿಂದ ಬಡಿದಾಟ ಹೊಡೆದಾಟಗಳು ನಡೆಯಲಿದೆ. ರಾಜಕೀಯ ಕೊಲೆಗಳು ಹೆಚ್ಚಾಗಲಿದೆ. ಹಿಂಸಾಚಾರಗಳು ತಾಂಡವವಾಡಲಿದೆ. ಆಕ್ರಮಣ, ಅತಿಕ್ರಮಣ ಹೆಚ್ಚಾಗಲಿದೆ. ಇವೆಲ್ಲವೂ ಮೂರನೇ ಮಹಾಯುದ್ಧಕ್ಕೆ ಕಾರಣವಾಗಲಿದೆ ಎಂದು ನಿಕೋಲಸ್ ಭವಿಷ್ಯ ನುಡಿದಿದ್ದಾನೆ.
ಹವಾಮಾನ ವೈಪರಿತ್ಯಗಳಿಂದ ಭಾರಿ ಮಳೆ, ಪ್ರವಾಹಗಳು ಸೃಷ್ಟಿಯಾಗಲಿದೆ. ಕಂಡು ಕೇಳರಿಯದ ಪ್ರವಾಹ, ಮಳೆ ಕಾಣಲಿದೆ. ಹಲವರು ಬದುಕು ಕೊಚ್ಚಿ ಹೋಗಲಿದೆ. ಮನೆ ಮಠ ಕಳೆದುಕೊಳ್ಳುತ್ತಾರೆ. ಇಷ್ಟೇ ಅಲ್ಲ ಸಮುದ್ರ ಮಟ್ಟ ಏರಿಕೆಯಾಗಲಿದೆ. ಇದರಿಂದ ಕೆಲ ನಗರಗಳು ಮುಳುಗಡೆಯಾಗಲಿದೆ ಎಂದಿದ್ದಾನೆ.
ನಿಕೋಲಸ್ 2018ರಲ್ಲಿ ಕೋವಿಡ್ ಮಹಾಮಾರಿ ಬರಲಿದೆ ಎಂದಿದ್ದ. 2019ರ ಅಂತ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ವೈರಸ್‌ನಿಂದ ಇಡೀ ವಿಶ್ವವೇ ಸ್ಥಬ್ಧವಾಗಿತ್ತು. ಇನ್ನು ಅಮೆರಿಕದಲ್ಲಿ ಕೆಲ ಸಂಘರ್ಷದ ಕುರಿತು ಈತ ಭವಿಷ್ಯ ನುಡಿದಿದ್ದ. ಈ ಪೈಕಿ ಬ್ಲಾಕ್ ಲೀವ್ಸ್ ಮ್ಯಾಟರ್ ಅಭಿಯಾನ ಹಾಗೂ ಹೋರಾಟದ ಕುರಿತು ಈತ ಭವಿಷ್ಯ ನುಡಿದಿದ್ದ. ಇನ್ನು ಡೋನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಗೆಲುವು, ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಪ್ರಾಬಲ್ಯ ಸೇರಿದಂತೆ ಹಲವು ಭವಿಷ್ಯಗಳು ನಿಜವಾಗಿದೆ. ಹೀಗಾಗಿ ಇದೀಗ 2025ರ ಕುರಿತು ನಿಕೋಲಸ್ ಹೇಳಿರುವ ಭವಿಷ್ಯ ನಿಜವಾಗಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.