ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಕುಂಕುಮ ಇಟ್ಟುಕೊಳ್ಳಲು ನಿರಾಕರಿಸಿದ್ದಾರೆ. ಜನಕಲ್ಯಾಣ ಸಮಾವೇಶದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೊಯ್ಸಳ ರೆಸಾರ್ಟ್‌ಗೆ ಆಗಮಿಸಿದ್ದರು.
ಈ ವೇಳೆ, ರೆಸಾರ್ಟ್ ಸಿಬ್ಬಂದಿಗಳು ಸಿದ್ದರಾಮಯ್ಯನವರಿಗೆ ಸ್ವಾಗತ ಕೋರುವ ವೇಳೆ ಕುಂಕುಮ ಇಡಲು ಮುಂದಾದರು. ಈ ವೇಳೆ ಸಿದ್ದರಾಮಯ್ಯ ಬೇಡ ಎಂದು ನಿರಾಕರಿಸಿದ್ದಾರೆ.
ಈ ವೇಳೆ ಸಚಿವ ಕೆ.ರಾಜಣ್ಣ, ತಿಲಕ ಅಷ್ಟೇ ಸರ್ ಎಂದು ಹೇಳಿದರು ಕೂಡ ಸಿಎಂ ಬೇಡ ಎಂದು ತೆರಳಿದ್ದಾರೆ. ಡಿಕೆಶಿ ಕೂಡ ತಿಲಕ ಇಟ್ಟುಕೊಳ್ಳದೆ, ಬೇಡ ಎಂದು ತೆರಳಿದ್ದಾರೆ.