ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ನೀರು ಬ್ಲಾಕ್ ಆಗಲು ಕಾರಣವೇನು?: ಕೇಂದ್ರ ಸಚಿವಾಲಯ ನೀಡಿದ್ರು ಸ್ಪಷ್ಟೀಕರಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳೆದ ಕೆಲವು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ (Bengaluru Mysuru Expressway) ನಲ್ಲಿ ನೀರು ನಿಂತಿದ್ದು, ವಾಹನ ಸವಾರರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಭಾನುವಾರ ಸ್ಪಷ್ಟೀಕರಣ ನೀಡಿದೆ.

`ರಾಮನಗರ ಸಮೀಪದ ಗ್ರಾಮಸ್ಥರು ಚರಂಡಿಯ ಮಾರ್ಗವನ್ನು ತಡೆಹಿಡಿದಿದ್ದರು. ಆದ್ದರಿಂದ ರಸ್ತೆಯಲ್ಲಿ ನೀರು ನಿಲ್ಲುವಂತಾಗಿತ್ತು’ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ರಾಮನಗರದ (Ramanagara) ಬಳಿಯಿರುವ ಮಾದಾಪುರ ಗ್ರಾಮಸ್ಥರು ಹಾಗೂ ಇತರರು ತಮ್ಮ ಕೃಷಿ ಜಮೀನು ಮತ್ತು ಗ್ರಾಮಕ್ಕೆ ಅಡ್ಡದಾರಿ ನಿರ್ಮಿಸಿಕೊಂಡು, ಆ ಮೂಲಕ ಪ್ರವೇಶಿಸಲು ಪ್ರಯತ್ನಿಸಿದ್ದರು. ಅದಕ್ಕಾಗಿ 3 ಮೀಟರ್ ಅಗಲಕ್ಕೆ ಚರಂಡಿಯನ್ನು ಮಣ್ಣಿನಿಂದ ಮುಚ್ಚಿದ್ದರು. ಅವರು ನಿರ್ಮಿಸಿದ್ದ ಅಡ್ಡದಾರಿಯನ್ನು ಮಾರ್ಚ್ 18 ರಂದು ತೆಗೆದುಹಾಕಿದ್ದು, ಚರಂಡಿಮಾರ್ಗವನ್ನು ಮುಕ್ತಗೊಳಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

ರಸ್ತೆ ನಿರ್ಮಾಣವಾದ ಬಳಿಕ ಬೆಂಗಳೂರು ಹೊರವಲಯದಲ್ಲಿ ಸಾಧಾರಣ ಬೇಸಿಗೆ ಮಳೆಯಿಂದಾಗಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ರಾಮನಗರದ ರಸ್ತೆ ಜಲಾವೃತವಾಗಿತ್ತು. ಇದರಿಂದ ವಾಹನ ಸವಾರರಿಗೆ ತೊಂದರೆಯಾಗಿ, ರಸ್ತೆ ಅಪಘಾತಗಳೂ ಸಂಭವಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!