ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ ಪ್ರಧಾನಿ ಮೋದಿ,ಹೆಚ್.ಡಿ.ದೇವೇಗೌಡರಿಗೂ ಏನು ಸಂಬoಧ: ಹೆಚ್.ಡಿ.ಕುಮಾರಸ್ವಾಮಿ ಗರಂ

ಹೊಸದಿಗಂತ ವರದಿ, ರಾಯಚೂರು :

ಪ್ರಜ್ವಲ್ ರೇವಣ್ಣ ಅವರ ಪ್ರಕರಣಕ್ಕೂ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೂ ಏನು ಸಂಬoಧ. ಅವರ ಹೆಸರನ್ನು ಈ ಘಟನೆಯಲ್ಲಿ ಏಕೆ ತರುತ್ತೀರಿ ಎಂದು ಕಾಂಗ್ರೆಸ್ ನಾಯಕರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತರಾಟಗೆ ತಗೆದುಕೊಂಡರು.

ಜಿಲ್ಲೆಯ ಸಿಂಧನೂರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ ಮಾಜಿ ಪ್ರಧಾನಿ ದೇವೇಗೌಡರಿಗೂ, ಬಿಜೆಪಿಗೂ, ಕುಮಾರಸ್ವಾಮಿಯವರಿಗೂ ಏನು ಸಂಬoಧ. ನಮ್ಮೆಲ್ಲೆರ ಹೆಸರನ್ನು ಈ ಘಟನೆಯಲ್ಲಿ ಏಕೆ ತರುತ್ತೀರಿ ಎಂದು ಕಾಂಗ್ರೆಸ್ಸಿಗರನ್ನು ಪ್ರಶ್ನಿಸಿದರು.

ಈ ಘಟನೆಗೆ ಸಂಬoಧಿಸಿದoತೆ ಪ್ರಕರಣ ದಾಖಲಾಗುವುದಕ್ಕೂ ಪೂರ್ವದಲ್ಲಿನೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆ ಆಗಲೇ ಬೇಕು. ಈ ಪ್ರಕರಣಕ್ಕೆ ಸಂಬoಧಿಸಿದoತೆ ಕೇಂದ್ರ ಗೃಹ ಸಚಿವರು ಅನೇಕ ಸ್ಪಷ್ಟನೆಗಳನ್ನು ಕೊಟ್ಟಿದ್ದಾರೆ. ಕೋರ್ಟ್ನಲ್ಲಿ ಪ್ರಕರಣ ಇದ್ದಾಗ ಒಂದು ವಾರಗಳಕಾಲ ಸಮಯಾವಕಾಶವನ್ನು ಕೇಳಿಕೊಂಡಿದ್ದಾರೆ. ನಾನು ಬರುವುದಿಲ್ಲ ಎಂದು ಹೇಳಿಲ್ಲ. ೮-೧೦ ಬಾರಿ ಕೋರ್ಟ್ದಿಂದ ಸಮನ್ಸ್ ನೀಡಿದ್ದರೂ ಕೋರ್ಟ್ಗೆ ಹಾಜರಾಗದಿರುವವರನ್ನು ನೋಡಿದ್ದೇವೆ. ನ್ಯಾಯಾಲಯದ ಸಮೆನ್ಸ್ಗೆ ಗೌರವ ಕೊಡದವರನ್ನೂ ನೋಡಿದ್ದೇವೆ. ಆ ವ್ಯಕ್ತಿ ಬರುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಎಸ್‌ಐಟಿ ಮುಂದೆ ಹಾಜರಗುತ್ತೇನೆ ಒಂದು ವಾರ ಕಾಲಾವಕಾಶವನ್ನು ಕೇಳಿದ್ದಾರೆ ಎಂದರು.

ತನಿಖೆ ಸರಿಯಾದ ಮಾರ್ಗದಲ್ಲಿ ನಡೆಯಬೇಕು ಎಂದುಕೊoಡಿದ್ದೀರೋ ಇಲ್ಲವೆ ಈ ಪ್ರಕರಣವನ್ನು ಪ್ರಚಾರಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದೀರೋ. ಈ ಪ್ರಕರಣದಲ್ಲಿ ನನ್ನ ಹೆಸರನ್ನೂ ತರುತ್ತಿದ್ದಾರೆ. ಸಧ್ಯದಲ್ಲಿನೇ ಸತ್ಯಾಸತ್ಯತೆಗಳು ಹೊರಗೆ ಬರಲಿವೆ ಎಂದರು.

ಕಾಂಗ್ರೆಸ್ ಪಕ್ಷದ ಮೇಟಿ ಅವರನ್ನು ಕೂಡಿಸಿಕೊಂಡು ಕಾಂಗ್ರೆಸ್ಸಿಗರೇ ಚುನಾವಣಾ ಪ್ರಚಾರ ಮಾಡಿದ್ದಾರೆ ಎನ್ನುವುದನ್ನು ಸಿದ್ದರಾಮಯ್ಯ ಮರೆತಂತೆ ಕಾಣುತ್ತದೆ. ಪ್ರಜ್ವಲ್ ರೇವಣ್ಣ ಪ್ರಕರಣ ಹೊರಗೆ ಬರುವುದಕ್ಕೂ ಪೂರ್ವದಲ್ಲಿ ಪ್ರಧಾನಿ ಮೋದಿಯವರು ಚುನಾವಣಾ ಪ್ರಚಾರಕ್ಕೆ ಬಂದಿದ್ದರು. ಕಾಂಗ್ರೆಸ್ಸಿಗರು ಈ ಕುರಿತು ಮೋದಿಯವರಿಗೆ ಮೊದಲೇ ತಿಳಿಸಬೇಕಾಗಿತ್ತು. ಆಗ ಮೋದಿಯವರು ಪ್ರಚಾರಕ್ಕೆ ಬಂದಿದ್ದರೆ ಪ್ರಶ್ನಿಸಬೇಕಾಗಿತ್ತು ಎಂದು ತಿಳಿಸಿದರು.

ಈ ಪ್ರಕರಣವನ್ನು ಮೇ.೭ರ ಮತದಾನದಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮತದಾನದ ನಂತರ ಏನು ಮಾಡುತ್ತೀರಿ ಎನ್ನುವುದನ್ನು ಗಮನಿಸಬೇಕಾಗಿದೆ ಎಂದರು.

ಪ್ರಜ್ವಲ್ ರೇವಣ್ಣ ಅವರು ೪೦೦ ಅತ್ಯಾಚಾರ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಅವರಿಗೆ ಇಂತಹ ಮಾಹಿತಿಯನ್ನು ಮುಖ್ಯಮಂತ್ರಿ ಸಿದ್ದರಾಮ್ಯ ಇಲ್ಲವೆ ಡಿ.ಕೆ.ಶಿವಕುಮಾರ ನೀಡಿರಬೇಕು. ಪ್ರಕರಣ ಎಸ್‌ಐಟಿಯಲ್ಲಿದೆ ಹೀಗಿದ್ದರೂ ರಾಹುಲ್ ಗಾಂಧಿ ಅವರು ಇಂತಹ ಹೇಳಿಕೆಯನ್ನು ನೀಡಿದ್ದಕ್ಕೆ ರಾಹುಲ್ ಗಾಂಧಿ ಅವರಿಗೆ ನೊಟೀಸ್ ನೀಡಿ ಅವರ ಮೇಲೆ ಮೊದಲು ದೂರು ದಾಖಲಿಸಿಕೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಮಹಿಳೆಯರ ಫೋಟೋ ಮತ್ತು ವಿಡಿಯೋಗಳನ್ನು ದೇಶದ ತುಂಬೆಲ್ಲ ಹರಿಬಿಡುತ್ತಿರುವಿರಿ ಆ ಮಹಿಳೆಯರ ಬದುಕಿನ ಬಗ್ಗೆ ಸರ್ಕಾರ ಚಿಂತನೆಯನ್ನು ಮಾಡಿದೆಯೇ. ವಿಡಿಯೋ ಮತ್ತು ಫೋಟೋ ಯಾರು ಹರಿ ಬಿಟ್ಟಿದ್ದಾರೆ ಎನ್ನುವದನ್ನು ಪತ್ತೆ ಹಚ್ಚಿ ಮೊದಲು ಅವರ ವಿರುದ್ಧ ಪ್ರಕರಣ ದಾಖಲಿಸಿ ಎಂದು ಒತ್ತಾಯಿಸಿದರು.

ಈ ಪ್ರಕರಣವನ್ನು ಎಸ್‌ಐಟಿಗೆ ನೀಡಬೇಕು ಎಂದು ಚಿಂತನೆಯನ್ನು ಮಾಡುತ್ತಿರುವದಾಗಿ ಏ.೨೭ ರಂದು ಎಕ್ಸ್ ಖಾತೆಯನ್ನು ಹಾಕಿಕೊಂಡಿದ್ದೀರಿ. ಆದರೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿದ್ದು ಏ.೨೬ ರಂದು ಹೀಗಿರುವಾಗ ಹೆಚ್.ಡಿ.ದೇವೇಗೌಡರು ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಚಿತಾವಣೆ ಮಾಡಿ ಪ್ರಜ್ವಲ್ ರೇವಣ್ಣ ಅವರನ್ನು ವಿದೇಶಕ್ಕೆ ಕಳಿಸಿದ್ದಾರೆ ಎಂದು ಕಾಂಗ್ರೆಸ್ಸಿಗರು ಹೇಳಿದ್ದಾರೆ. ಈ ಕ್ಯಾಸೆಟ್‌ಗಳನ್ನು ಕುಮಾರಸ್ವಾಮಿ ಅವರೇ ಹರಿಬಿಟ್ಟಿದ್ದಾರೆ ಎಂದು. ಇದನ್ನು ಅನುಭವಿಗಳು ಮಾತ್ರ ಮಾಡಲು ಸಾಧ್ಯ. ಕಾಂಗ್ರೆಸ್ಸಿಗರು ಟೆಂಟ್‌ಗಳಲ್ಲಿ ವಿಡಿಯೋ ಹಾಕುತ್ತಿದ್ದೀರಲ್ಲ ಅಂತಹವರು ಮಾತ್ರ ಇಂತಹ ಕೆಲಸವನ್ನು ಮಾಡುವುದಕ್ಕೆ ಸಾಧ್ಯ ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!