ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಚಿವ ಕೆ. ಎನ್. ರಾಜಣ್ಣ, ಇಂದು ಗೃಹ ಸಚಿವ ಪರಮೇಶ್ವರ್ ರನ್ನು ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿ. ಸಚಿವರೊಂದಿಗೆ ಮಾತುಕತೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ಅಹಮದಾಬಾದ್ಗೆ ಹೋಗಿ ಬಂದ್ಮೇಲೆ ಭೇಟಿ ಮಾಡಿರಲಿಲ್ಲ, ಹೀಗಾಗಿ ಭೇಟಿ ಮಾಡಿದ್ದೇನೆ. ಕೇಂದ್ರ ಸರ್ಕಾರ ಗ್ಯಾಸ್ ಬೆಲೆ ಏರಿಕೆ ಮಾಡಿದೆ. ಕಳೆದ 11 ವರ್ಷಗಳಿಂದ ಹಲವು ಬೆಲೆ ಏರಿಕೆಗಳು ಆಗಿವೆ. ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಬೇಕು. ಜೊತೆಗೆ ಹಲವು ವಿಚಾರಗಳ ಬಗ್ಗೆ ಪರಮೇಶ್ವರ್ ಜತೆ ಚರ್ಚೆ ನಡೆಸಿದ್ದೇನೆ ಎಂದರು.
ಹನಿಟ್ರ್ಯಾಪ್ ವಿಚಾರವಾಗಿ ಮಾತನಾಡಿ, ಪ್ರಕರಣದ ತನಿಖೆ ನಡೆಯುತ್ತಿದೆ. ನಾನು ತನಿಖೆ ನಡುವೆ ಮಾತನಾಡಲ್ಲ. ನಾನು ಸಿಐಡಿ ತನಿಖೆಗೆ ಹೋಗ್ತೇನೆ. ಯತ್ನಾಳ್ ಅವರು ನನ್ನ ಹೆಸರನ್ನು ಪ್ರಸ್ತಾಪಿಸಿ ಸದನದಲ್ಲಿ ಮಾತನಾಡಿದ್ದರು. ಅದಕ್ಕಾಗಿ ನಾನು ಸದನದಲ್ಲಿ ಪ್ರಕರಣದ ಪ್ರಸ್ತಾಪ ಮಾಡಿದೆ ಎಂದರು.