ವಿಜಯಪುರದಲ್ಲಿ ವಕ್ಫ್‌​ನ ಒಟ್ಟು ಆಸ್ತಿಪಾಸ್ತಿ ಎಷ್ಟಿದೆ? ಸಚಿವ ಕೃಷ್ಣಬೈರೇಗೌಡ ಕೊಟ್ರು ಮಾಹಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್;

ವಿಜಯಪುರ ಜಿಲ್ಲೆಯ ರೈತರಿಗೆ ವಕ್ಫ್‌ ಬೋರ್ಡ್​ನಿಂದ ನೋಟಿಸ್ ವಿಚಾರ ಸದ್ಯ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ ಪ್ರತಿಕ್ರಿಯಿಸಿದ್ದು, ವಿಜಯಪುರ ಜಿಲ್ಲೆಯಲ್ಲಿ 14,201 ಎಕರೆ ವಕ್ಫ್ ಆಸ್ತಿ ಎಂದು 1973-74ರಲ್ಲಿ ನೋಟಿಫಿಕೇಷನ್ ಆಗಿದೆ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪೈಕಿ 700 ಎಕರೆ ಮಾತ್ರ ವಕ್ಫ್‌ ಬೋರ್ಡ್‌ನ ಸ್ವಾಧೀನದಲ್ಲಿದೆ. ಉಳಿದ ಆಸ್ತಿಗಳು ಕೆಲವು ಮುಸ್ಲಿಂ ಸಂಸ್ಥೆಗಳ ವಶದಲ್ಲಿವೆ. ಕೆಲವು ಆಸ್ತಿ ಈದ್ಗಾ ಮೈದಾನ ಆಗಿದೆ, ದರ್ಗಾ ಹೆಸರಲ್ಲಿದೆ. 1319 ಎಕರೆ ಯಾವುದೇ ವೈಯಕ್ತಿಕ ಅನುಭೋಗದಲ್ಲಿ ಇಲ್ಲ. 1319 ಎಕರೆ ಯಾರಿಗೂ ಮಂಜೂರು ಆಗಿಲ್ಲ ಎಂದು ಹೇಳಿದ್ದಾರೆ.

ಇವುಗಳನ್ನು ಇಂದೀಕರಣ ಮಾಡಬಹುದು ಅಂತಾ ತೀರ್ಮಾನಿಸಲಾಗಿದೆ. 11,835 ಎಕರೆ ಉಳುವವನೇ ಭೂಒಡೆಯ ಅಡಿ ಮಂಜೂರಾಗಿದೆ. ಬೇರೆ ಬೇರೆ ಯೋಜನೆಗಳಿಗೂ ಭೂಸ್ವಾಧೀನ ಆಗಿದೆ. ಇದು ಯಾವುದಕ್ಕೂ ನೋಟಿಸ್ ಕೊಟ್ಟಿಲ್ಲ, ಕೊಡುವ ಉದ್ದೇಶವೂ ಇಲ್ಲ. ವಕ್ಫ್ ಇಲಾಖೆಯ ಸಚಿವ ಜಮೀರ್‌ ಕೂಡ ಇದಕ್ಕೆ ಸೂಚನೆ ನೀಡಿಲ್ಲ ಎಂದಿದ್ದಾರೆ.

1977ರಲ್ಲೇ ಹೊನವಾಡ ಗ್ರಾಮವನ್ನು ವಕ್ಫ್‌ನಿಂದ ತೆಗೆದುಹಾಕಲಾಗಿದೆ. ಹೊನವಾಡ ಗ್ರಾಮದಲ್ಲಿ 11 ಎಕರೆ ಮಾತ್ರ ವಕ್ಫ್‌ ಆಸ್ತಿ ಇದೆ. ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಹೊನವಾಡದಲ್ಲಿರುವ ಗ್ರಾಮದ ಯಾವ ರೈತರಿಗೂ ನೋಟಿಸ್ ನೀಡಿಲ್ಲ. ಇದು ವಕ್ಫ್‌ ಹಾಗೂ ರೈತರ ನಡುವೆ ಇರುವ ಸಮಸ್ಯೆಯಲ್ಲ. ಇದು ಕೇವಲ ಯತ್ನಾಳ್‌, ವಿಜಯೇಂದ್ರ ನಡುವೆ ಇರುವ ಸಮಸ್ಯೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!