ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲ ಸಿನಿಮಾಗಳು ಕೋಟಿ ಕೋಟಿ ರೂಪಾಯಿ ಬಾಚಿದ ಸುದ್ದಿಯನ್ನು ನೋಡಿದ್ದೀರಿ, ಆದರೆ ಮೇಲ್ನೋಟಕ್ಕೆ ಕಾಣುವಂತೆ ಎಲ್ಲವೂ ಇಲ್ಲ. ಅದರಲ್ಲಿಯೂ ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ಸಮಸ್ಯೆ ಎದ್ದು ಕಾಣಿಸುತ್ತಿದೆ.
ಮಲಯಾಳಂ ಸಿನಿಮಾ ಪ್ರದರ್ಶಕರು ಈಗಾಗಲೇ ಪ್ರತಿಭಟನೆ ಘೋಷಿಸಿದ್ದು ಶೀಘ್ರವೇ ಮಲಯಾಳಂ ಚಿತ್ರರಂಗದ ಎಲ್ಲ ಚಟುವಟಿಕೆಗಳು ಬಂದ್ ಆಗಲಿದೆ.
ಇದರ ಜೊತೆಗೆ ಭಾರತದ ಬಲು ಲಾಭದಾಯಕ ಸಿನಿಮಾ ರಂಗ ಎನಿಸಿಕೊಂಡಿರುವ ತೆಲುಗಿನಲ್ಲಿಯೂ ಸಮಸ್ಯೆಗಳು ಪ್ರಾರಂಭವಾಗಿದ್ದು, ತೆಲುಗು ಸಿನಿಮಾ ಪ್ರದರ್ಶಕರು ಸಹ ಪ್ರತಿಭಟನೆ ಘೋಷಿಸಿದ್ದು ಜೂನ್ 1 ರಿಂದ ಚಿತ್ರಮಂದಿರಗಳನ್ನು ಬಂದ್ ಮಾಡುವುದಾಗಿ ಹೇಳಿದ್ದಾರೆ.
ಇತ್ತೀಚೆಗೆ ತೆಲುಗು ಇಂಡಸ್ಟ್ರೀಯಲ್ಲಿಯೂ ಸತತವಾಗಿ ಸಿನಿಮಾಗಳು ಸೋಲುತ್ತಿದ್ದು ಸಿನಿಮಾ ವಿತರಕರು, ಪ್ರದರ್ಶಕರು ನಷ್ಟ ಅನುಭವಿಸುತ್ತಿದ್ದಾರೆ. ಇದೇ ಕಾರಣಕ್ಕೆ ಈಸ್ಟ್ ಗೋಧಾವರಿ ಭಾಗದ ಸಿನಿಮಾ ಪ್ರದರ್ಶಕರು ಪ್ರತಿಭಟನೆಗೆ ಕರೆ ನೀಡಿದ್ದು, ಜೂನ್ 1 ರಿಂದ ಈಸ್ಟ್ ಗೋಧಾವರಿ ಭಾಗದ ಎಲ್ಲ ಚಿತ್ರಮಂದಿರಗಳನ್ನು ಬಂದ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.