May 10, 2026
Sunday, May 10, 2026
spot_img

ಇವನ್ಯಾವ ಸೀಮೆ ಗಂಡ ಸ್ವಾಮೀ! ಸಾವಿರ ರೂಪಾಯಿಗೆ ಹೆಂಡತಿಯನ್ನೇ ಸ್ನೇಹಿತರಿಗೆ ಮಾರಿದ ಪತಿ! ಆಮೇಲೇನಾಯ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಫೈಜ್‌ಗಂಜ್ ಬೆಹ್ತಾ ಪ್ರದೇಶದಲ್ಲಿ ಹಣಕ್ಕಾಗಿ ತನ್ನ ಪತ್ನಿಯನ್ನು ಸ್ನೇಹಿತರಿಗೆ ಮಾರಿದ ಆರೋಪದಲ್ಲಿ ಪತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಮಹಿಳೆಯ ದೂರಿನ ಪ್ರಕಾರ, ಸಂಜೆ ಗ್ಯಾಸ್ ಏಜೆನ್ಸಿಗೆ ಹೋಗುವ ವೇಳೆ ಪತಿ ತನ್ನ ಸ್ನೇಹಿತರಾದ ಬಾಲ್ ಕಿಶನ್ ಮತ್ತು ಪಪ್ಪುವಿನಿಂದ ಸಾವಿರ ರೂಪಾಯಿ ಪಡೆದು ತನ್ನನ್ನು ಅವರೊಂದಿಗೆ ಕಳುಹಿಸಿದ್ದಾನೆ. ಮನೆಗೆ ಮರಳುವ ಮಾರ್ಗದಲ್ಲಿ ಇಬ್ಬರೂ ಆಕೆಯನ್ನು ಸಮೀಪದ ತೋಟಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:

ಘಟನೆಯ ನಂತರ ಮಹಿಳೆ ತಕ್ಷಣವೇ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಬಾಲ್ ಕಿಶನ್ ಮತ್ತು ಪಪ್ಪುವನ್ನು ಬಂಧಿಸಿದ್ದಾರೆ. ಮಹಿಳೆಯ ಪತಿ ಪರಾರಿಯಾಗಿದ್ದು, ಅವನಿಗಾಗಿ ಶೋಧ ಮುಂದುವರಿದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವೈದ್ಯಕೀಯ ಪರೀಕ್ಷೆ ನಡೆಸಿ ತನಿಖೆಯನ್ನು ಮುಂದುವರೆಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !