ರಾಹುಲ್ ಗಾಂಧಿ ಹೇಳುವುದು ಸುಳ್ಳು: ನಿಜ ಸಂಗತಿ ತಿಳಿಸಿದ ಸಚಿವ ಪ್ರಹ್ಲಾದ್‌ ಜೋಶಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ (Narendra Modi) ಒಬಿಸಿ (OBC- ಇತರೆ ಹಿಂದುಳಿದ ವರ್ಗದ) ಸಮುದಾಯದಲ್ಲಿ ಹುಟ್ಟಿಲ್ಲ ಎಂಬ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಹೇಳಿಕೆಗೆ ಕೇಂದ್ರ ಸರಕಾರ ತಿರುಗೇಟು ನೀಡಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ನಾಚಿಕೆಯೇ ಆಗುವುದಿಲ್ಲವೇ? ಬರೀ ಸುಳ್ಳು ಸುಳ್ಳು ಸುದ್ದಿಗಳನ್ನು ಹರಿ ಬಿಡುತ್ತಿದ್ದಾರೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ನ (Congress) ಸುಳ್ಳಿನ ಬುತ್ತಿಯನ್ನು ಎಳೆ ಎಳೆಯಾಗಿ ಬಿಚ್ಚಿಡುವ ಸಮಯ ಬಂದಿದೆ. ವಾಸ್ತವ ಬೇರೆಯೇ ಇರುವಾಗ ಕಾಂಗ್ರೆಸ್ ಬರೀ ಸುಳ್ಳುಗಳನ್ನೇ ಹೆಣೆದು ಜನರ ಕಿವಿಗೆ ಹೂವಿನ ಗೊಂಚಲೇ ಇಡುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಇಲ್ಲಿದೆ ಸತ್ಯ:
ಮೋದಿಯವರು ಗುಜರಾತ್ (Gujarat) ಮುಖ್ಯಮಂತ್ರಿಯಾಗುವ ಎರಡು ವರ್ಷಗಳ ಮೊದಲು 1999ರ ಅಕ್ಟೋಬರ್ 27ರಂದು ಅವರ OBC ಸ್ಥಾನಮಾನವನ್ನು ಗುರುತಿಸಲಾಗಿದೆ ಎಂದು ಜೋಶಿ ದಾಖಲೆ ಸಮೇತ ಸ್ಪಷ್ಟಪಡಿಸಿದ್ದಾರೆ.

ಪ್ರಧಾನಿ ಮೋದಿ ಅವರನ್ನು OBC ಅಲ್ಲ ಎನ್ನುವ ಮೂಲಕ ಕಾಂಗ್ರೆಸ್ ಮತ್ತೊಮ್ಮೆ ಇಡೀ OBC ಸಮುದಾಯವನ್ನೇ ಅವಮಾನಿಸಿದೆ. ಒಬಿಸಿ ವರ್ಗದವರೆಲ್ಲ ಲೋಕಸಭೆ ಚುನಾವಣೆಯಲ್ಲಿ ಪ್ರತಿಧ್ವನಿಸುವ ಮೂಲಕ ರಾಹುಲ್ ಗಾಂಧಿ ಆರೋಪಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೋಶಿ ಎಚ್ಚರಿಸಿದ್ದಾರೆ.

ಕೇಂದ್ರ ಸರಕಾರ ಮಾತು
ಜುಲೈ 25, 1994 ರಂದು ಮೋದಿಯವರ ತವರು ರಾಜ್ಯವಾದ ಗುಜರಾತ್ ನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಒಬಿಸಿಗಳ ಪಟ್ಟಿಯಲ್ಲಿ ಉಪ-ಗುಂಪನ್ನು ಸೇರಿಸುವ ಅಧಿಸೂಚನೆಯನ್ನು ಕೇಂದ್ರ ಸರ್ಕಾರವು ರಾಹುಲ್ ಗಾಂಧಿಗೆ ನೆನಪಿಸಿದೆ.ಏಪ್ರಿಲ್ 4, 2000 ರ ಭಾರತ ಸರ್ಕಾರದ ಅಧಿಸೂಚನೆಯ ಪ್ರಕಾರ ಅದೇ ಉಪ-ಗುಂಪನ್ನು ಒಬಿಸಿ (ಪಟ್ಟಿ) ಸೇರಿಸಲಾಗಿದೆ. ಎರಡೂ ಅಧಿಸೂಚನೆಗಳನ್ನು ಬಿಡುಗಡೆ ಮಾಡಿದಾಗ ನರೇಂದ್ರ ಮೋದಿ ಅವರು ಅಧಿಕಾರದಲ್ಲಿ ಇರಲಿಲ್ಲ ಮತ್ತು ಆ ಸಮಯದಲ್ಲಿ ಕಾರ್ಯನಿರ್ವಾಹಕ ಕಚೇರಿಯನ್ನು ಹೊಂದಿರಲಿಲ್ಲ ಎಂದು ಸರ್ಕಾರ ಹೇಳಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!