Thursday, March 23, 2023

Latest Posts

ರಾಜ್ಯದಲ್ಲಿ ಸಿದ್ದರಾಮಯ್ಯ ಏನು ಹೇಳ್ತಾರೋ ಅದರ ಉಲ್ಟಾ ಆಗುತ್ತೆ: ಸಿ.ಟಿ.ರವಿ

ಹೊಸದಿಗಂತ ವರದಿ, ಬಾಗಲಕೋಟೆ:

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಉಲ್ಟಾ ಮಚ್ಚೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿರು. ಏನೇ ಮಾಡಿದ್ರೂ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂದ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.
ಸಿದ್ದು ಹೇಳಿದರ ವಿರುದ್ಧವಾಗಿ ಹಿಂದೆಯೂ ಸಹ ನಡೆದಿದೆ.‌ಯಡಿಯೂರಪ್ಪ ಅವರಪ್ಪರಾಣೆ ಸಿಎಂ ಆಗಲ್ಲ ಅಂದ್ರು, ಬಿಎಸ್ವೈ ಸಿಎಂ ಆಗಿದ್ದಾರೆ.ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಆಗ್ತೀನಿ ಅಂದಾಗ ಆಗಲಿಲ್ಲ. ಮೋದಿ ಪ್ರಧಾನಿ ಆಗೋಕೆ ಸಾಧ್ಯನೇ ಇಲ್ಲ ಅಂದಿದ್ರು, ಅವರು ಆದರು.ಈ ರಾಜ್ಯದಲ್ಲಿ ಅವರು ಏನು ಹೇಳ್ತಾರೋ ಅದರ ಉಲ್ಟಾ ಆಗುತ್ತೆ ಎಂದ ಸಿ.ಟಿ.ರವಿ‌ ಹೇಳಿದರು..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!