ವರಮಹಾಲಕ್ಷ್ಮಿ ವ್ರತ ಆಚರಣೆ ವೇಳೆ ಮುಟ್ಟಾದರೆ ಏನು ಮಾಡಬೇಕು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶ್ರಾವಣ ಮಾಸ ಎಂದರೆ ವರಲಕ್ಷ್ಮೀ ವ್ರತ.. ವಿವಾಹಿತ ಮಹಿಳೆಯರು ಭಕ್ತಿಯಿಂದ ವರಲಕ್ಷ್ಮೀ ವ್ರತ ಮಾಡುತ್ತಾರೆ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಈ ವರಲಕ್ಷ್ಮಿ ವ್ರತವನ್ನು ಮಾಡುವುದರಿಂದ ವರಲಕ್ಷ್ಮಿ ದೇವಿಯು ಅದೃಷ್ಟದ ವರಗಳನ್ನು ನೀಡುತ್ತಾಳೆ ಮತ್ತು ಗಂಡನ ಆಯುಷ್ಯವನ್ನು ಹೆಚ್ಚಿಸುತ್ತಾಳೆ ಎಂಬ ನಂಬಿಕೆ ಇದೆ. ಆದರೆ, ಈ ಸಮಯದಲ್ಲಿ ಮಹಿಳೆಯರನ್ನು ಹೆಚ್ಚು ಚಿಂತೆ ಮಾಡುವ ವಿಷಯವೆಂದರೆ ಋತುಚಕ್ರ. ಹಬ್ಬದಂದು ಪೀರಿಯಡ್ಸ್ ಬಂದರೆ ಏನು ಮಾಡಬೇಕು ಎಂಬುದನ್ನು ತಿಳಿಯೋಣ.

ವ್ರತ ಆಚರಣೆಯ ಸಂದರ್ಭದಲ್ಲಿ ಮುಟ್ಟಾದರೆ, ಅದನ್ನು ಅಲ್ಲಿಗೇ ಬಿಟ್ಟು ಮುಂದಿನ ವಾರ ಮತ್ತೆ ಪೂಜೆಗಳನ್ನು ನಡೆಸುವುದು ಉತ್ತಮ. ಆಗಲೂ ಯಾವುದಾದರೂ ಸೂತಕದ ವಾತಾವರಣವಿದ್ದರೆ, ವರಲಕ್ಷ್ಮಿ ವ್ರತವನ್ನು ನವರಾತ್ರಿಯ ಶುಕ್ರವಾರದಂದು ಆಚರಿಸಬಹುದು ಎಂದು ಶಾಸ್ತ್ರ ಹೇಳುತ್ತದೆ. ವರಗಳನ್ನು ಕೊಡುವ ತಾಯಿಯಾದ ಕಾರಣ ಆಕೆಯನ್ನು ವರಲಕ್ಷ್ಮಿ ಎಂದು ಕರೆಯುತ್ತಾರೆ.

ಶ್ರಾವಣ ಮಾಸದ ಹುಣ್ಣಿಮೆಯ ಹಿಂದಿನ ಶುಕ್ರವಾರದಂದು ವರಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ಗೃಹಿಣಿಯರು ಮತ್ತು ಮಹಿಳೆಯರು ಕುಟುಂಬದ ಸದಸ್ಯರ ಕಲ್ಯಾಣಕ್ಕಾಗಿ ವ್ರತವನ್ನು ಮಾಡುತ್ತಾರೆ. ಅಷ್ಟಲಕ್ಷ್ಮಿಯನ್ನು ಪೂಜಿಸುವುದರಿಂದ ಅಷ್ಟೈಶ್ವರ್ಯದ ಫಲ ಸಿಗುತ್ತದೆ ಎಂದು ನಂಬಲಾಗಿದೆ. ಕೆಲವರು ಈ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಿದರೆ, ಇನ್ನು ಕೆಲವರು ಮನೆಯಲ್ಲಿ ದೇವಿಯನ್ನು ತಯಾರಿಸಿ ಭಕ್ತಿಯಿಂದ ಪೂಜಿಸುತ್ತಾ ಹಾಡುಗಳನ್ನೂ ಹಾಡುತ್ತಾರೆ. ಪೂಜೆಯ ನಂತರ ಐವರು ಹಿರಿಯರ ಬಳಿ ಆಶೀರ್ವಾದ ಪಡೆಯುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!