ಹೊಸದಿಗಂತ ಡಿಜಿಟಲ್ ಡೆಸ್ಕ್;
ಬೆಂಗಳೂರಿಗೆ ತಂದಿದ್ದು ನಾಯಿ ಮಾಂಸ ಅಲ್ಲ, ಕುರಿ ಮಾಂಸ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು , ಬೆಂಗಳೂರಿನ ಹೊಟೇಲ್ ಗಳಿಗೆ ನಾಯಿ ಮಾಂಸ ಪೂರೈಕೆ ಮಾಡಲಾಗುತ್ತಿದೆ ಎಂಬ ವದಂತಿಗೆ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು ನಗರದ ಅನೇಕ ರೆಸ್ಟೋರೆಂಟ್ಗಳು ಮತ್ತು ಮಟನ್ ಅಂಗಡಿಗಳಿಗೆ ರಾಜಸ್ಥಾನದಿಂದ ನಾಯಿಗಳ ಮಾಂಸವನ್ನು ಸರಬರಾಜು ಮಾಡಲಾಗುತ್ತಿದೆ ಎಂಬ ಸುದ್ದಿ ಬೆಂಗಳೂರು ನಗರದ ನಿವಾಸಿಗಳನ್ನು ಬೆಚ್ಚಿಬೀಳಿಸಿತ್ತು. ನಂತರ ಆಹಾರ ಸುರಕ್ಷತಾ ಅಧಿಕಾರಿಗಳು ಮಟನ್ ಅನ್ನು ಪ್ರಯೋಗಾಲಯಕ್ಕೆ ಸ್ಥಳಾಂತರಿಸಿದ್ದರು. ನಂತರ ಅದು ನಾಯಿ ಮಾಂಸವಲ್ಲ ಎಂದು ವರದಿ ಧೃಡಪಡಿಸಿತ್ತು.