ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕರೆಲ್ಲ ವಿರೋಧ ಪಕ್ಷದ ನಾಯಕ ಅರ್ ಆಶೋಕ ಅವರನ್ನು ಜ್ಯೋತಿಷಿ ಎಂದು ಕರೆಯಲಾರಂಭಿಸಿದ್ದಾರೆ.
ಮಾಧ್ಯಮಗಳೊಡನೆ ಮಾತಾಡಿದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ವಿರೋಧ ಪಕ್ಷದ ನಾಯಕರಾಗಿರುವ ಅಶೋಕ ವ್ಯಾಲಿಡ್ ಪ್ರಶ್ನೆಗಳನ್ನು ಕೇಳೋದು ಬಿಟ್ಟು ಭವಿಷ್ಯವಾಣಿ ನುಡಿಯುತ್ತಾ ತಿರುಗಾಡುತ್ತಿದ್ದಾರೆ, ಅವರಿಗೆ ವಿಜಯೇಂದ್ರ ಅಥವಾ ಯತ್ನಾಳ್ ಭವಿಷ್ಯ ಏನು ಅಂತ ಗೊತ್ತಿಲ್ಲ ಅದರೆ ಕಾಂಗ್ರೆಸ್ ನಾಯಕರ ಬಗ್ಗೆ ಜ್ಯೋತಿಷ್ಯ ಹೇಳುತ್ತಿದ್ದಾರೆ, ಅದು ಹೋಗಲಿ ಅವರಿಗೆ ತಮ್ಮ ಭವಿಷ್ಯದ ಬಗ್ಗೆಯಾದರೂ ಗೊತ್ತಿದೆಯಾ? ಎಂದು ಪ್ರಶ್ನಿಸಿದ್ದಾರೆ.
ಯಾಕೆಂದರೆ ತಾನಂದುಕೊಳ್ಳುವ ಹಾಗೆ ಅವರಿಂದ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಕಸಿದುಕೊಂಡು ಇವತ್ತು ದೆಹಲಿಗೆ ಹೋಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಬಣಕ್ಕೆ ನೀಡುವ ಸಾಧ್ಯತೆ ಇದೆ, ಬಿಜೆಪಿ ವರಿಷ್ಠರು ಯಡಿಯೂರಪ್ಪ ಕುಟುಂಬವನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ ಎಂದು ಈಶ್ವರ್ ಹೇಳಿದರು.