ತರಾತುರಿಯಲ್ಲಿ ಬಂಧಿಸುವ ಅವಶ್ಯಕತೆ ಏನಿತ್ತು? ಇದೆಲ್ಲಾ ಗೃಹಸಚಿವರ ಪ್ಲ್ಯಾನ್: ಆರ್.ಅಶೋಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆರ್ ಆರ್ ನಗರ ಶಾಸಕ ಮುನಿರತ್ನ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಪ್ರಕರಣಗಳಲ್ಲಿ ಲಾಕ್ ಆಗಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಗೃಹ ಸಚಿವರು ಪ್ಲಾನ್ ಮಾಡಿ ಬಂಧಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇಲ್ಲದಿದ್ದಲ್ಲಿ ಇಂದು ಆತನನ್ನು ಏಕೆ ಬಂಧಿಸಿದ್ದಾರೆ? 3 ದಿನ ಕೋರ್ಟ್ ಇಲ್ಲ ಅಂತಾ ಪ್ಲ್ಯಾನ್​ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಕೋಲಾರಕ್ಕೆ ನುಗ್ಗಿ ಬಂಧಿಸುವ ಅಗತ್ಯವಿಲ್ಲ. ಕಾನೂನಿನ ಪ್ರಕಾರ ಅವರಿಗೆ ಎಚ್ಚರಿಕೆ ನೀಡಬೇಕಿತ್ತು. ಮುನಿರತ್ನ ಯಾವುದಕ್ಕೂ ಓಡಿ ಹೋಗಲಿಲ್ಲ. ಈ ಆಡಿಯೊವನ್ನು FSL ಗೆ ಒದಗಿಸಬೇಕಿತ್ತು. ನಿನ್ನೆಯಷ್ಟೇ ಮುನಿರತ್ನ ಮೇಲೆ ದೂರು ನೀಡಿದ್ದು ಯಾಕೆ? ಅವರ ದ್ವೇಷ ರಾಜಕಾರಣದಿಂದಾಗಿ ಅವರನ್ನು ಜೈಲಿಗೆ ಕಳುಹಿಸಲೇಬೇಕೆಂದು ಯೋಚಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!