ಮಂತ್ರಿ ಮಾಲ್ ಇದ್ದ ಜಾಗದಲ್ಲಿ ಮುಂಚೆ ಏನಿತ್ತು ಗೊತ್ತಾ? ಜಗ್ಗೇಶ್ ಹೇಳ್ತಾರೆ ಕೇಳಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾನು ಇದೇ ಏರಿಯಾಗಳಲ್ಲಿ ವರ್ಷಾನುಗಟ್ಟಲೆ ಓಡಾಡಿಕೊಂಡಿದ್ದೇನೆ. ಮಂತ್ರಿ ಮಾಲ್ ಇದ್ದ ಜಾಗದಲ್ಲಿ ಮುಂಚೆ ಏನಿತ್ತು ಗೊತ್ತಾ? ಇಲ್ಲಿ ಬಟ್ಟೆ ಮಿಲ್ ಇತ್ತು ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.

ದಸರಾ ಸಮಯದಲ್ಲಿ ತೋತಾಪುರಿ ಸಿನಿಮಾ ರಿಲೀಸ್ ಆಗುತ್ತಿದ್ದು, ಮಂತ್ರಿ ಮಾಲ್‌ನಲ್ಲಿ ಪ್ರೀ ರಿಲೀಸ್ ಈವೆಂಟ್ ನಡೆದಿದೆ. ಈ ವೇಳೆ ಮಂತ್ರಿ ಮಾಲ್ ಇದ್ದ ಜಾಗದ ಬಗ್ಗೆ ಜಗ್ಗೇಶ್ ಮಾತನಾಡಿದ್ದಾರೆ.

ನಾನು ಸಣ್ಣವನಿದ್ದಾಗ ಇಲ್ಲಿ ಬಟ್ಟೆ ಮಿಲ್ ಇತ್ತು. ನನ್ನಪ್ಪ ಇಲ್ಲಿ ಕೆಲಸ ಮಾಡುತ್ತಿದ್ದರು. ರಾಜಾ ಮಿಲ್‌ನಲ್ಲಿ ಅಪ್ಪ ಕೆಲಸ ಮಾಡುವಾಗ ಅಮ್ಮ ಊಟ ತಂದು ಕೊಡುತ್ತಿದ್ದಳು. ಆಗ ನನ್ನನ್ನೂ ಕರೆದುಕೊಂಡು ಬರುತ್ತಿದ್ದರೂ, ಇಲ್ಲೇ ಕಟ್ಟೆಗಳ ಮೇಲೆ ಕೂತು ಅದೆಷ್ಟೋ ಊಟ ಮಾಡಿದ್ದೇನೆ. ಅಪ್ಪನನ್ನು ತೋರಿಸಿ, ನೀನು ಹೀಗೆ ಆಗಬೇಡ, ನೀನು ದೊಡ್ಡ ವ್ಯಕ್ತಿ ಆಗು ಅಂತ ಅಮ್ಮ ಯಾವಾಗಲೂ ಹೇಳುತ್ತಿದ್ದಳು ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!