MENTAL HEALTH | ಏನಾದ್ರೂ ಆಗಲಿ, ಖುಷಿಯಾಗಿರಿ!

  • ಮೇಘನಾ ಶೆಟ್ಟಿ, ಶಿವಮೊಗ್ಗ

ಸೋಮವಾರ ಬಂತೆಂದ್ರೆ ಏನೋ ಮೋಡ ಕವಿದ ವಾತಾವರಣ, ಅದೇ ಶುಕ್ರವಾರ ಸಂಜೆಯಾಗ್ತಿದ್ದಂತೇ ಸೂರ್ಯ, ಚಂದ್ರ ಎಲ್ಲರೂ ಒಟ್ಟಿಗೇ ಕಂಡಂಥ ಖುಷಿ, ಸಮಾಧಾನ ! ಇದಕ್ಕೆ ವೀಕೆಂಡ್ ಅನ್ನೋ ಹೆಸರು.

Happy Girl On Bicycle With Balloons Wall Art Paintingಎಂದಾದ್ರೂ ಯೋಚನೆ ಮಾಡಿದ್ದೀರಾ? ನಮಗ್ಯಾಕೆ ಸೋಮವಾರ ಶತ್ರು ಶುಕ್ರವಾರ ಮಿತ್ರ? ಶುಕ್ರವಾರ ಕೆಲಸ ಮುಗಿಸಿ ಮನೆಗೆ ಹೊರಟಮೇಲೆ ನಮ್ಮನ್ನು ಹೇಳೋರು ಕೇಳೋರು ಯಾರೂ ಇಲ್ಲ. ನಮಗೆ ನಾವೇ ಬಾಸ್, ಯಾವ ಟೈಮ್ ಟೇಬಲ್ ಇಲ್ಲ, ನಿರ್ಬಂಧ ಇಲ್ಲ. ಆದರೆ ಭಾನುವಾರ ರಾತ್ರಿಯಿಂದಲೇ ಬೇಸರ ಶುರು, ಬೆಳಗ್ಗೆ ಬೇಗ ಏಳ್ಬೇಕು, ತಿಂಡಿ ಏನು? ಯಾವ ಕೆಲಸ ಪೆಂಡಿಂಗ್ ಇದೆ.. ಹೀಗೆ..

How to Be Happy - The New York Timesಆದರೆ ಏನು ಗೊತ್ತಾ? ಹೀಗಿರೋದೇ ಬೆಸ್ಟ್! ವಾರವಿಡೀ ಕೆಲಸ ಮಾಡದವರಿಗೆ ವೀಕೆಂಡ್ ಬೆಲೆ ತಿಳಿಯೋದಿಲ್ಲ. ಬರೀ ಮೋಜು ಮಸ್ತಿಯಲ್ಲೇ ದಿನಗಳನ್ನು ಕಳೆಯೋರಿಗೆ ಕುಳಿತು ಕೆಲಸ ಮಾಡೋ ಖುಷಿ ಇರೋದಿಲ್ಲ. ಎಲ್ಲದಕ್ಕೂ ನಿಮ್ಮ ಮನಸ್ಸೇ ಕಾರಣ, ಮನಸ್ಸು ನಿಮ್ಮ ಹಿಡಿತದಲ್ಲಿದ್ದರೆ ಅದು ನಿಮ್ಮ ಕಟ್ಟಾಳು, ಇಲ್ಲದೇ ಹೋದರೆ ಶತ್ರು.

Why Happiness Is the Key to Success - The Atlantic

ಖುಷಿಯಾಗಿ ಇರೋದು ಹೇಗೆ?

  1. ಎಲ್ಲದಕ್ಕೂ ಕೃತಜ್ಞತೆ ಬೆಳೆಸಿಕೊಳ್ಳಿ, ಶುದ್ಧ ಗಾಳಿಗೆ, ಕುಡಿಯುವ ನೀರಿಗೆ, ತಿನ್ನುವ ಅನ್ನಕ್ಕೆ, ತಲೆಯ ಮೇಲಿನ ಸೂರಿಗೆ, ಬಣ್ಣ ಬಣ್ಣದ ಬಟ್ಟೆಗೆ, ಕೆಲಸ ಕೊಟ್ಟ ಕಂಪನಿಗೆ, ಕುಟುಂಬದ ಪ್ರೀತಿಗೆ, ಸ್ನೇಹಿತರ ಕಾಟಕ್ಕೆ ಚಿರಋಣಿಯಾಗಿರಿ. ಇದೆಲ್ಲವೂ ಎಲ್ಲರಿಗೂ ಇರೋದಿಲ್ಲ!
  2. ಸಕಾರಾತ್ಮಕ ಚಿಂತನೆ ಅನ್ನೋದು ಒಂದು ದಿನಕ್ಕೆ ಬೆಳೆಯೋ ಮೊಳಕೆ ಕಾಳಲ್ಲ! ದಿನವೂ ಅದಕ್ಕೆ ನೀರು, ಬಿಸಿಲು ನೀಡುತ್ತಾ ಪೋಷಿಸುವ ಗಿಡ. ಚಾಲೆಂಜ್ ಯಾರಿಗಿಲ್ಲ? ನಿಭಾಯಿಸುವ ಪರಿ ಮೇಲೆ ನಿಮ್ಮ ವ್ಯಕ್ತಿತ್ವ ಅವಲಂಬಿತವಾಗಿದೆ ಅಷ್ಟೆ.
  3. ನಿಮ್ಮ ಭಾವನೆಗಳನ್ನು ಗುರುತಿಸಿ ಪೋಷಿಸೋ ಹವ್ಯಾಸ ಬೆಳೆಸಿಕೊಳ್ಳಿ. ಕೆಟ್ಟ ಕಮೆಂಟ್‌ನ್ನು ಅರಗಿಸಿಕೊಳ್ಳುವ, ಖುಷಿಯ ಕಮೆಂಟ್‌ಗಳನ್ನು ಇಷ್ಟಪಟ್ಟು ಮುಂದುವರಿಸುವ ಮೈಂಡ್‌ಸೆಟ್ ನಿಮ್ಮದಾಗಲಿ.
  4. ಸಿಟ್ಯುಯೇಷನ್ ಯಾವುದೇ ಇರಲಿ ಖುಷಿಯಾಗಿರೋದನ್ನು ಆರಿಸೋದು ನಿಮ್ಮ ಆಯ್ಕೆ. ಮಗು ನಿಮ್ಮ ಮನೆಯ ಗೋಡೆ ಮೇಲೆ ಚಿತ್ರ ಬರೆದಿದೆ. ಇದನ್ನು ಹೇಗೆ ಅನಲೈಸ್ ಮಾಡ್ತೀರಿ? ಮನೆ ಗೋಡೆ ಹಾಳಾಯ್ತು ಅಂತಿರೋ? ಮಗು ಚಿತ್ರ ನೋಡಿ ಖುಷಿ ಪಡ್ತೀರೋ? ಗೋಡೆ ತಾನೆ ಇನ್ನೂ ಬರಿ ಎಂದು ಎನ್‌ಕರೇಜ್ ಮಾಡ್ತೀರೋ ಎಲ್ಲವೂ ನಿಮಗೆ ಬಿಟ್ಟದ್ದು.

    ಇವುಗಳನ್ನು ಓದಿದಾಗ ಹೊಸ ಹುಮ್ಮಸ್ಸು ಬರಬಹುದು, ಖುಷಿ ಕೊಡುವ ಕೆಲಸವನ್ನು ಹುಡುಕಿ ಮಾಡಬಹುದು. ಆದರೆ ಕಾಲಕ್ರಮೇಣ ಎನರ್ಜಿ ಡೌನ್ ಆಗುತ್ತದೆ. ಓದಿದ್ದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ, ಯಾವುದೇ ಸಂದರ್ಭವನ್ನು ನೋಡುವ ರೀತಿ ಬದಲಾಯಿಸಿ.

    Live Life by Heather Larsson for MatchBack Media on Dribbble
    ಜಗತ್ತು ಕೆಟ್ಟದು ಎನ್ನೋದಾದ್ರೂ ಪರವಾಗಿಲ್ಲ ನೀವು ಸಕಾರಾತ್ಮಕವಾಗಿರಿ, ಇನ್ನೊಂದು ಜೀವಕ್ಕೆ ಪಾಸಿಟಿವ್ ಎನರ್ಜಿ ನೀಡಿ. ಇದು ಹೀಗೆ ಚೈನ್ ರೀತಿ ಮುಂದುವರಿಯಲಿ. ಒಂದೊಳ್ಳೆ ಜಗತ್ತಿನಲ್ಲಿ ಎಲ್ಲರೂ ಜೀವಿಸುವಂತೆ ಆಗಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!