ಸಾಮಾಗ್ರಿಗಳು
ಒಂದು ಕಪ್ ಮೈದಾ ಹಿಟ್ಟು
ಒಂದು ಕಪ್ ಗೋಧಿ ಹಿಟ್ಟು
ರುಚಿಗೆ ತಕ್ಕ ಉಪ್ಪು, ಸಕ್ಕರೆ
2 ಚಮಚ ತುಪ್ಪ
ಒಂದೂವರೆ ಕಪ್ ತೆಂಗಿನ ತುರಿ
ಒಂದು ಕಪ್ ಚೆನ್ನಾಗಿ ಹುಡಿ ಮಾಡಿದ ಬೆಲ್ಲ
ಹೇಗೆ ಮಾಡೋದು?
ಮೈದಾಹಿಟ್ಟು, ಗೋಧಿ ಹಿಟ್ಟು, ಸಕ್ಕರೆ ಮತ್ತು ಉಪ್ಪು ಸೇರಿಸಿ ಅದಕ್ಕೆ 2 ಚಮಚ ಬಿಸಿ ಮಾಡಿದ ತುಪ್ಪ ಸೇರಿಸಿ. ಬಳಿಕ ಚೆನ್ನಾಗಿ ಮಿಶ್ರಣ ಮಾಡಿ 14 ರಿಂದ 15 ನಿಮಿಷ ಹಾಗೆಯೇ ಬಿಡಿ.
ಹೂರಣ ತಯಾರಿಸಲು ಬಾಣಲೆಗೆ ಒಂದೂವರೆ ಕಪ್ ತೆಂಗಿನ ತುರಿ, ಒಂದು ಕಪ್ ಚೆನ್ನಾಗಿ ಪುಡಿ ಮಾಡಿದ ಬೆಲ್ಲ ಸೇರಿಸಿ ಮಿಶ್ರಣ ಮಾಡಿ. ಬೆಂಕಿಯ ಬಿಸಿಗೆ ಬೆಲ್ಲ ಕರಗಲು ಪ್ರಾರಂಭವಾಗುತ್ತದೆ. ಬೆಲ್ಲ ಕರಗಿದ ಬಳಿಕ ಬಾಣಲೆಯನ್ನು ಕೆಳಗಿಳಿಸಿ. ಸ್ವಲ್ಪ ಏಲಕ್ಕಿ ಸೇರಿಸಿ.
ಹಿಟ್ಟನ್ನು ಮೈದಾದಲ್ಲಿ ಅದ್ದಿ ಚಪಾತಿಯಂತೆ ಲಟ್ಟಿಸಬೇಕು. ಬೇಕಾದ ಗಾತ್ರಕ್ಕೆ ಹಿಟ್ಟನ್ನು ಲಟ್ಟಿಸಬಹುದು. ಬಳಿಕ ತಯಾರಿಸಿಟ್ಟ ಹೂರಣವನ್ನು ಅದರ ಮಧ್ಯದಲ್ಲಿ ಇಟ್ಟು ಕೈಯಲ್ಲೇ ತಿರುಗಿಸುತ್ತಾ ಸರಿಯಾದ ಆಕಾರಕ್ಕೆ ತರಬೇಕು. ಬಳಿಕ ಕುದಿಯುವ ಎಣ್ಣೆಗೆ ಅದನ್ನು ಹಾಕಿ ಸರಿಯಾಗಿ ಬೆಂದ ಬಳಿಕ ಎಣ್ಣೆಯಿಂದ ತೆಗೆಯಬೇಕು. ಈಗ ಮೋದಕ ಸಿದ್ಧ.